Bengaluru

ಸಾಲಾರ್‌ ಸ್ಟೋರಿ ಲೀಕ್‌ ಆಯ್ತಾ..?; ಚಿತ್ರತಂಡವೇ ಬಿಟ್ಟುಕೊಡ್ತಾ ಮಾಹಿತಿ..?

ಬೆಂಗಳೂರು: ಕೆ.ಜಿ.ಎಫ್.–2 ಚಿತ್ರದಲ್ಲಿ ನಟ ಯಶ್‌ ಬಾಯಲ್ಲಿ ವೈಲೆನ್ಸ್… ವೈಲೆನ್ಸ್… ವೈಲೆನ್ಸ್.. ಡೈಲಾಗ್‌ ಸಖತ್‌ ಫೇಮಸ್‌ ಆಗಿದೆ. ಅದು ಎಲ್ಲರಿಗೂ ಗೊತ್ತೇ ಇರುವ ವಿಚಾರ. ಆದ್ರೆ, ಈ ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಪ್ರಭಾಸ್‌ ನಟನೆಯ ಸಾಲಾರ್‌ ಚಿತ್ರದಲ್ಲೂ ಇದೇ ಡೈಲಾಗ್‌ ಹೇಳಿಸಲು ಹೊರಟಿರುವ ಕ್ಲ್ಯೂ ಸಿಕ್ಕಿದೆ.

ಈ ಮಾತಿಗೆ ಸಲಾರ್‌ ಚಿತ್ರದ ಹೊಸ ಪೋಸ್ಟರ್‌ ಪುಷ್ಠಿ ಕೊಟ್ಟಿದೆ. ಸಲಾರ್‌ ಪೋಸ್ಟರ್‌ನಲ್ಲಿ ಪ್ರಭಾಸ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ವೈಲೆನ್ಸ್ ಡೈಲಾಗ್‌ಗಳು ಕಾಣಿಸಿಕೊಂಡಿರುವುದರಿಂದ ಚಿತ್ರದಲ್ಲಿ ವೈಲೆನ್ಸ್ ಡೈಲಾಗ್‌ಗಳು ಮುಂದುವರೆಯಲಿವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್‌ನ ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿರುವ ಪಾನ್‌ ಇಂಡಿಯಾ ಸಿನಿಮಾ ‘ಸಲಾರ್’ ದೇಶದಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿಯ ಈ ವೈಲೆನ್ಸ್ ಸಂಭಾಷಣೆ ‘ಸಲಾರ್‌‘ನಲ್ಲೂ ಮುಂದುವರೆಯಲಿದೆ.

ಟಾಲಿವುಡ್‌ನ ಖ್ಯಾತನಟ ಪ್ರಭಾಸ್‌ ನಟನೆಯ ಚಿತ್ರವಿದು. ಫಸ್ಟ್ ಲುಕ್, ಪೋಸ್ಟರ್ ಮೂಲಕವೇ ‘ಸಲಾರ್’ ಚಿತ್ರ ಈಗಾಗಲೇ ದೇಶವ್ಯಾಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ ಲುಕ್ ಸಹ ಅಷ್ಟೇ ಕುತೂಹಲವನ್ನು ಕೆರಳಿಸಿದೆ.

Share Post