Bengaluru

ಮೂರೇ ಕಡೆ ಕನ್ನಡ RRR ಸಿನಿಮಾ ಬಿಡುಗಡೆ; #BoycottRRRinKarnataka ಟ್ರೆಂಡಿಂಗ್‌

ಬೆಂಗಳೂರು: ಬಾಹುಬಲಿ ಖ್ಯಾತಿಯ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ಆದ್ರೆ ರಾಜ್ಯದಲ್ಲಿ ಆರ್‌ಆರ್‌ಆರ್‌ ಸಿನಿಮಾದ ಕನ್ನಡ ಅವತರಣಿಗೆ ಕೇವಲ ಎರಡು, ಮೂರು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಇದರ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಿನಿಪ್ರಿಯರು ಹಾಗೂ ಕನ್ನಡ ಹೋರಾಟಗಾರರು #BoycottRRRinKarnataka ಅಭಿಯಾನ ಶುರುಮಾಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ‘ಆರ್‌ಆರ್‌ಆರ್‌‘ ಕನ್ನಡದಲ್ಲಿ ಕೂಡಾ ಡಬ್‌ ಆಗಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಪ್ರಿ ರಿಲೀಸ್‌ ಇವೆಂಟ್‌ ಕೂಡಾ ಮಾಡಲಾಗಿದೆ. ಅಲ್ಲಿ ಕನ್ನಡ ಅವತರಣಿಕೆ ಹಾಡುಗಳನ್ನೇ ಪ್ರದರ್ಶನ ಮಾಡಲಾಗಿದೆ. ಆದರೂ ಕನ್ನಡ ಅವತರಣಿಕೆ ಬೆಂಗಳೂರಿನಲ್ಲಿ ಕೇವಲ ಎರಡು ಅಥವಾ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಹಿಂದಿ, ತೆಲುಗು, ತಮಿಳಿನ ಸಿನಿಮಾಗಳಿಗಿಂತ ಕನ್ನಡ ಅವತರಿಣಿಕೆಯ ಸಿನಿಮಾ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕು ಎಂದು ಕನ್ನಡಿಗರು ಒತ್ತಾಯಿಸಿದ್ದಾರೆ.

Share Post