Bengaluru

Harsha murder case:ವಿಚಾರಣೆ ಬಳಿಕ ಪ್ರಕರಣವನ್ನು ಯಾವ ಇಲಾಖೆಗೆ ನೀಡಬೇಕೆಂದು ತೀರ್ಮಾನ ಮಾಡ್ತೇವೆ-ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಆರ್.ಟಿ.ನಗರ ನಿವಾಸದ ಬಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಬಳಿಕ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಮಾತನಾಡಿ, ಘಟನೆ ಸಂಬಂಧ ಈಗಾಗಲೇ ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ.

ವಿಚಾರಣೆ ನಡೆಯುತ್ತಿದೆ. ಬಂಧಿಸಿದವರ ತನಿಖೆ ನಡೆಯುತ್ತದೆ. ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮತ್ತೆ ಯಾವುದೇ ರೀತಿಯ ಗೊಂದಲ, ಗಲಭೆಗಳು ಉಂಟಾಗಿಲ್ಲ. ವಿಚಾರಣೆ ನಡೆದ ಬಳಿಕ ಯಾವ ಇಲಾಖೆಗೆ ಪ್ರಕರಣವನ್ನು ತನಿಖೆಗಾಗಿ ನೀಡಬೇಕೆಂಬುದನ್ನು ತೀರ್ಮಾನ ಮಾಡ್ತೇವೆ ಎಂದಿದ್ದಾರೆ.

ಕಾಂಗ್ರೆಸ್‌ನವರಿಗೆ ಇಂತಹ ಕೆಲಸಗಳನ್ನು ಹಿಂದೆ ಮಾಡಿ ಮಾಡಿ ಇಂತಹ ಅನುಭವದ ಮಾತುಗಳನ್ನಾಡುತ್ತಾರೆ. ಅವರ ಹೇಳಿಕೆಗಳಲ್ಲಿ ಯಾವುದೇ ಸತ್ಯ ಇಲ್ಲ ಎಂದಿದ್ದಾರೆ.

Share Post