NationalSports

ಮೌಂಟ್‌ ಎವರೆಸ್ಟ್‌ ಏರಿ ಸಾಧನೆ ಮಾಡಿದ ತೆಲಂಗಾಣದ ಯುವತಿ

ಹೈದರಾಬಾದ್; ತೆಲಂಗಾಣದ ಯುವತಿಯೊಬ್ಬರು ಮೌಂಟ್‌ ಎವರೆಸ್ಟ್‌ ಏರಿ ದಾಖಲೆ ಮಾಡಿದ್ದಾರೆ. ಈ ಮೂಲಕ ಅನ್ವಿತಾ ರೆಡ್ಡಿ ತನ್ನ ಯಶೋಗಾಥೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ.

    ಅನ್ವಿತಾ ರೆಡ್ಡಿ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಯರ್ರಂಬಳ್ಳಿ ಗ್ರಾಮದ ನಿವಾಸಿ. ಅವರು ಸಮುದ್ರ ಮಟ್ಟದಿಂದ 8,848.86 ಮೀಟರ್ ಎತ್ತರದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಎವರೆಸ್ಟ್ ಏರಿ ಈ ಮಹತ್​ ಸಾಧನೆ ಮಾಡಿದ್ದಾರೆ.

    ಮೂಲ ಶಿಬಿರದಿಂದ 5 ದಿನಗಳಲ್ಲಿ ಮೌಂಟ್ ಎವರೆಸ್ಟ್ ಏರಿ ಎಲ್ಲರ ಗಮನ ಸೆಳೆದಿದ್ದಾರೆ. ಹೈದರಾಬಾದ್‌ನ ಟ್ರಾನ್ಸ್‌ಸೆಂಡ್ ಅಡ್ವೆಂಚರ್ಸ್ ಮುಖ್ಯಸ್ಥ ಶೇಖರ್ ಬಾಬು ಬಾಚಿನೆಪಲ್ಲಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಈ ಪ್ರಯತ್ನವನ್ನು ಅನಿತಾ ರೆಡ್ಡಿ ಅವರು ಮಾಡಿದ್ದಾರೆ.

Share Post