BengaluruCinemaPolitics

ನಾಳೆ ಸಿಹಿ ಸುದ್ದಿ ಕೊಡ್ತಾರಂತೆ ನಟಿ, ಮಾಜಿ ಸಂಸದೆ ರಮ್ಯಾ

ಬೆಂಗಳೂರು; ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅವರು ಮತ್ತೆ ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿರುವ ಟ್ವೀಟ್‌. ಇಂದು ಅವರು ಒಂದು ಟ್ವೀಟ್‌ ಮಾಡಿದ್ದು, ನಾಳೆ ನಿಮ್ಮೊಂದಿಗೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

‘ನಾನು ಕೈಗೊಳ್ಳುವ ನಿರ್ಧಾರದ ಬಗ್ಗೆ ನೀವು ಯೋಚಿಸುವುದಿಲ್ಲವೇ..? ನಾಳೆ ಬೆಳಗ್ಗೆ 11.15ಕ್ಕೆ ನಾನೊಂದು ಸಿಹಿ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ಇದು ಅಧಿಕೃತʼ ಎಂದು ರಮ್ಯಾ ಬರೆದುಕೊಂಡಿದ್ದಾರೆ. ರಮ್ಯಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ‘ಇದು ಮದುವೆ ಸಂಬಂಧಿಸಿದ್ದೋ ಅಥವಾ ಹೊಸ ಸಿನಿಮಾದಲ್ಲೇನಾದರೂ ನಟಿಸುತ್ತಿದ್ದೀರೋ’ ಎಂದು ಪ್ರಶ್ನೆ ಮಾಡಿದ್ದಾರೆ.

Share Post