Bengaluru

ಹಬ್ಬಕ್ಕೆ ಊರಿನತ್ತ ಮುಖ ಮಾಡಿದ ಜನ; KSRTCಗೆ ಭರ್ಜರಿ ಲಾಭ

ಬೆಂಗಳೂರು; ಗಣೇಶ ಹಬ್ಬಕ್ಕೆ ಬೆಂಗಳೂರಿನಿಂದ ಸ್ವಗ್ರಾಮಗಳಿಗೆ ತೆರಳುವವರು ಸಂಖ್ಯೆ ಈ ಬಾರಿ ಹೆಚ್ಚಾಗಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಹೆಚ್ಚುವರಿ ಬಸ್‌ಗಳು ಬಿಟ್ಟಿದ್ದರೂ ಕೂಡಾ ಸೀಟುಗಳಿಗೆ ಡಿಮ್ಯಾಂಡ್‌ ಜಾಸ್ತಿಯಾಗುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಈಗಾಗಲೇ ಟಿಕೆಟ್ ಬುಕ್ಕಿಂಗ್ ಹೆಚ್ಚಾಗಿದೆ. ಇಂದಿನಿಂದಲೇ ಬುಕ್ಕಿಂಗ್ ಹೌಸ್‌ಫುಲ್ ಆಗಿದ್ದು, ಸ್ಥಳದಲ್ಲೇ ಟಿಕೆಟ್ ಖರೀದಿಸಿ ಹೋಗುವವರು ನಿಂತುಕೊಂಡೇ ಪ್ರಯಾಣಿಸಬೇಕಿದೆ. ಸದ್ಯ ಮೂರು ದಿನಗಳ ಕಾಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬಾರೀ ಬೇಡಿಕೆ ಹೆಚ್ಚಿದೆ.

ಇಂದು  8, 8,006 ಟಿಕೆಟ್‌ ಬುಕಿಂಗ್‌ ಆಗಿದೆ. ಆ.30 ರಂದು 9,206, ಆ.31 ರಂದು 5,692 ಸೀಟುಗಳು ಈಗಾಗಲೇ ಕಾಯ್ದಿರಿಸಲಾಗಿದೆ. ಇಂದು 40 ಬಸ್ಸುಗಳು ಹಾಗೂ ನಾಳೆ ಆಗಸ್ಟ್ 30 ರಂದು 67 ಬಸ್ಸುಗಳನ್ನು ಕಾಯ್ದಿರಿಸಲಾಗಿದ್ದು, ಹೆಚ್ಚುವರಿಯಾಗಿ 500 ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share Post