BengaluruPolitics

INDIA ಒಕ್ಕೂಟಕ್ಕಾಗಿ ಕಾವೇರಿ ಹಿತವನ್ನೇ ಬಲಿಕೊಡಲಾಗುತ್ತಿದೆ; ಮಾಜಿ ಸಿಎಂ ಹೆಚ್ಡಿಕೆ

ಬೆಂಗಳೂರು; INDIA ಒಕ್ಕೂಟಕ್ಕಾಗಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದ್ದು, ಈ ಮೂಲಕ ಕಾವೇರಿ ಹಿತವನ್ನೇ ಬಲಿ ಕೊಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಅವರು ಸರಣಿ ಟ್ವೀಟ್‌ ಮಾಡಿದ್ದಾರೆ. ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬ ಇಡುತ್ತಿರುವುದಕ್ಕೆ ಹೆಚ್ಡಿಕೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್‌ ನಾಯಕರು ಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಮಾಡಿದರು. ಈ ಮೂಲಕ ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟರು. ಇದೀಗ I.N.D.I.A.ಗೆ ಜೀವದಾನ ಮಾಡಲು ಕಾವೇರಿ ನದಿಯ ಹಿತವನ್ನೇ ಬಲಿದಾನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ ಭಯ ನಿಜವಾಗಿದ್ದು. ರಾಜ್ಯ ಕಾಂಗ್ರೆಸ್‌ ಸರ್ಕಾರ ಕನ್ನಡಿಗರಿಗೆ ಘೋರ ವಿಶ್ವಾಸದ್ರೋಹವೆಸಗಿದೆ. ಮಳೆ ಕಡಿಮೆಯಾಗಿದ್ದರಿಂದ ಜಲಾಶಯಗಳು ಇನ್ನೂ ತುಂಬಿಲ್ಲ. ಹೀಗಾಗಿ ರಾಜ್ಯದ ರೈತ ಬೆಳೆಗಳಿಗೇ ನೀರಿಲ್ಲ. ಬೆಂಗಳೂರು ನಗರಕ್ಕೂ ಕುಡಿಯವ ನೀರಿಗೂ ಸಮಸ್ಯೆಯಾಗಲಿದೆ ಎಂದು ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ನೀರು ಹರಿಸುವ ಮೂಲಕ ತಮಿಳುನಾಡು ಜತೆ ರಾಜಕೀಯ ಚೌಕ ಬಾರ ಆಡುತ್ತಿದೆ. ಇದೇನು ಇನ್ನೊಂದು ಗ್ಯಾರಂಟಿನಾ?  ಎಂದೂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

Share Post