ದಂತ ವೈದ್ಯೆಯ ಎಡವಟ್ಟು; ವಿರೂಪಗೊಂಡ ಸ್ಯಾಂಡಲ್‌ವುಡ್ ನಟಿಯ ಮುಖ..!
ಬೆಂಗಳೂರು; ದಂತವೈದ್ಯೆ ಎಡವಟ್ಟಿನಿಂದಾಗಿ ಉದಯೋನ್ಮುಖ ಸ್ಯಾಂಡಲ್‌ವುಡ್ ನಟಿ ಸ್ವಾತಿ ಮುಖ ವಿರೂಪಗೊಂಡಿದೆ. ಹಲ್ಲೊಂದರ ರೂಟ್ ಕೆನಾಲ್‌ಗೆಂದು ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದ ಸ್ವಾತಿಗೆ ಅಲ್ಲಿನ ವೈದ್ಯೆಯೊಬ್ಬರು ಮಾಡಿದ ಎಡವಟ್ಟಿನಿಂದಾಗಿ ಮುಖದಲ್ಲಿ ಊತ ಕಾಣಿಸಿದೆ.
2o ದಿನಗಳ ಹಿಂದೆ ಹುಳುಕು ಹಲ್ಲಿನ ಕಾರಣಕ್ಕಾಗಿ ಸ್ವಾತಿ, ರೂಟ್ ಕೆನಾಲ್ ಮಾಡಿಸಲು ಹೋಗಿದ್ದರು. ಈ ವೇಳೆ ವೈದ್ಯೆಯೊಬ್ಬರು ಅನಸ್ತೇಷಿಯಾ ನೀಡುವ ಬದಲು ಸಾಲಿಸೈಲಿಕ್ ಆಸಿಡ್ ನೀಡಿದ್ದಾರೆಂದು ಹೇಳಲಾಗಿದೆ. ಈ ಕಾರಣದಿಂದ ನಟಿಯ ಮುಖ ಊದಿಕೊಂಡಿದ್ದಾರೆ. ಆದ್ರೆ ಚಿಕಿತ್ಸೆ ನೀಡಿದ ವೈದ್ಯೆ ಎರಡು ಮೂರು ಗಂಟೆಗಳಲ್ಲಿ ಕಡಿಮೆಯಾಗುತ್ತದೆ ಎಂದು ಹೇಳಿದ್ದರು. ಮನೆಗೆ ಬಂದ ಸ್ವಾತಿಗೆ ಮತ್ತಷ್ಟು ಆತಂಕ ಕಾದಿತ್ತು. ಯಾಕಂದ್ರೆ ಸ್ವಾತಿ ಮುಖ ಮತ್ತಷ್ಟು ಊದಿಕೊಂಡಿತ್ತು.
20 ದಿನಗಳಾದರೂ ಸ್ವಾತಿ ಮುಖದಲ್ಲಿ ಊತ ಕಡಿಮೆಯಾಗಿಲ್ಲವಂತೆ. ಚಿಕಿತ್ಸೆ ನೀಡಿದ ವೈದ್ಯೆಗೆ ಕರೆ ಮಾಡಿದರೆ ನಾನು ಮುಂಬೈನಲ್ಲಿದ್ದೇನೆ ಎಂದು ಹೇಳುತ್ತಾರಂತೆ. ಹೀಗಾಗಿ ಸ್ವಾತಿ, ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರೆ ಆಸ್ಪತ್ರೆಗೆ ಹೋದಾಗಲೇ ವೈದ್ಯೆ ಮಾಡಿರುವ ಎಡವಟ್ಟು ಪತ್ತೆಯಾಗಿರೋದು.
ಅಂದಹಾಗೆ ನಟಿ ಸ್ವಾತಿ, ಎಫ್‌ಐಆರ್, 6 ಟು 6 ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆಂದು ತಿಳಿದುಬಂದಿದೆ.