ತಪ್ಪು ತಾನು ಮಾಡಿ, ಮಗಳಿಗೆ ಅಗ್ನಿಪ್ರವೇಶದ ಶಿಕ್ಷೆ, ಚಿನ್ನಾರಿ ಸಾವು
ತಮಿಳುನಾಡು: ಒಮ್ಮೊಮ್ಮೆ ತಪ್ಪನ್ನು ಹೆತ್ತವರು ಮಾಡಿ ಅದಕ್ಕೆ ಮಕ್ಕಳನ್ನು ಬಲಿಪಶು ಮಾಡ್ತಾರೆ. ಈ ಘಟನೆಯೂ ಹಾಗೆಯೇ..ತಾನು ಪವಿತ್ರಳೆಂದು ಸಾಬೀತು ಮಾಡಿಕೊಳ್ಳಲು ಹೆತ್ತ ಮಗಳಿಗೆ ಬೆಂಕಿ ಹಚ್ಚಿದ ಮನಕಲುಕುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಇಂತಹ ಹೇಯ ಕೃತ್ಯವೆಸಗಿದ ಪಾಪಿ ಹೆಸರು ಜಯಲಕ್ಷ್ಮಿ. ಈಯಮ್ಮಂಗೆ ಒಂದಲ್ಲಾ ಎರಡಲ್ಲಾ ಮೂರು ಮದುವೆಗಳನ್ನು ಮಾಡಿಕೊಂಡು ಹುಟ್ಟಿದ ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು ಹೋದ ಮಹಾ ಸತಿ ಈಕೆ. ಈಗ ಮೂರನೇ ಗಂಡ ನೀನು ನಿಜವಾಗಿ ಪವಿತ್ರಳಾಗೇ ಇದ್ದರೆ ನಿನ್ನ ಮಗಳಿಗೆ ಬೆಂಕಿ ಹಚ್ಚು ಅವಳಿಗೆ ಏನು ಆಗದಿದ್ರೆ ನೀನು ಶೀಲವಂತೆ ಅಂತ ನಾನು ಒಪ್ಪಿಕೊಳ್ತೇನೆ ಎಂದ ಮೂರನೇ ಗಂಡನ ಮಾತಿಗೆ. ತನ್ನ ಎರಡನೇ ಪತಿಗೆ ಹುಟ್ಟಿದ ಮಗಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ ಈ ಪರಮ ಪಾಪಿ.
ಜಯಲಕ್ಷ್ಮಿ 19 ವರ್ಷದಲ್ಲೇ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಇವರಿಬ್ಬರಿಗೆ ಹೆಣ್ಣು ಮಗು ಜನನವಾಘಿತ್ತು ಅದನ್ನು ತನ್ನ ತವರು ಮನೆಯಲ್ಲಿ ಬಿಟ್ಟು. ಪಾಲ್ವಣ್ಣನ್ ಕಿರಿಯ ಸಹೋದರ ದುರೈರಾಜ್ ಅನ್ನು ಮದುವೆಯಾಗಿ ಮುಂಬೈಗೆ ಹೋದಳು.
ಜಯಲಕ್ಷ್ಮಿ ತನ್ನ ಎರಡನೇ ಗಂಡನನ್ನು ಕೂಡ ಬಿಟ್ಟು ಅವರಿಬ್ಬರಿಗೆ ಹುಟ್ಟಿದ ಪವಿತ್ರಾಳನ್ನು ಕರೆದುಕೊಂಡು ಚೆನ್ನೈಗೆ ಬಂದಿದ್ದಳು. ಅಲ್ಲಿ ತಿರುವೊಟ್ಟಿಯೂರ್ ಪ್ರದೇಶದಲ್ಲಿ ನೆಲೆಸಿರುವ ಪದ್ಮನಾಭನ್ ಎಂಬುವವರನ್ನು ಮೂರನೇ ವಿವಾಹವಾಗಿ ಇಬ್ಬರು ಮಕ್ಕಳಿಗೆ ಹೆತ್ತವರಾದು.
ಆದ್ರೆ ಮೂರನೇ ಪತಿ ಕುಡಿದುಬಂದು ನೀನು ಪವಿತ್ರಳಲ್ಲ, ಹಾಗಿದ್ರೆ ನಿನ್ನ ಮಗಳಿಗೆ ಬೆಂಕಿ ಹಚ್ಚು ಎನ್ನುತ್ತಿದ್ದಂತೆ ಈ ಪಾಪಿ ಅಮ್ಮ ನಿದ್ರೆ ಮಾಡ್ತಿದ್ದ ಮಗಳನ್ನು ಎಳೆದುಕೊಂಡು ಬಂದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಮಗುವಿನ ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದವರು ಓಡಿ ಬಂದು ಮಗುವನ್ನು ಆಸ್ಪತ್ರೆಗೆ ದಾಖಲಸಿದ್ರು. ಆವೇಳೆಗಾಗಲೇ 75% ದೇಹ ಸುಟ್ಟು ಹೋಗಿತ್ತು ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಜಯಲಕ್ಷ್ಮಿ ಹಾಗೂ ಅವಳ ಮೂರನೇ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.