Bengaluru

ಕೊರೊನಾ ಸೋಂಕಿನಲ್ಲಿ ಗಣನೀಯ ಇಳಿಕೆ-6,151ಕೇಸ್‌ ದಾಖಲು, 49ಮಂದಿ ಸಾವು

ಬೆಂಗಳೂರು: ಕೊರೊನಾ ಸೋಂಕಿನಲ್ಲಿ ಗಣನೀಯ ಇಳಿಕೆ ಕಂಡಿದೆ. ಮಹಾಮಾರಿ ಸೋಂಕಿನಿಂದ ಬೆಚ್ಚಿಬಿದ್ದಿದ್ದ ಜನ ನಿಟ್ಟುಸಿರು ಬಿಡುವಂತಾಗಿದೆ. ಇಂದು ರಾಜ್ಯದಲ್ಲಿ 6,151ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟು 49ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.  16,802 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.  ಒಟ್ಟು 87,080 ಸಕ್ರಿಯ ಪ್ರಕರಣಗಳಿವೆ, ಕೊರೊನಾ ಪಾಸಿಟಿವಿಟಿ ದರ ಶೇ 6.19ರಷ್ಟಿದೆ. ಸರಾಸರಿ ಸಾವಿನ ಶೇಕಡಾವಾರು 0.79 ರಷ್ಟಿದೆ. ಇಲ್ಲಿವರೆಗೆ 39,02,309 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 37,75,799 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 39,396 ಜನ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ 2,718 ಮಂದಿಗೆ ಸೋಂಕು ತಗುಲಿದೆ, 6,726 ಜನರು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 35,631 ಸಕ್ರಿಯ ಪ್ರಕರಣಗಳಿವೆ, 15 ಜನ ಸಾವನ್ನಪ್ಪಿದ್ದಾರೆ. 17,60,176 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. 17,07,853 ಜನರು ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 35,631 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿವರೆಗೆ 17,60,176 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

Share Post