BengaluruPolitics

ಸೆಲ್ಯೂಟೂ ಇರುತ್ತೆ, ಒದೆನೂ ಇರುತ್ತೆ, ಗುಂಡು ಹಾರಿಸೋದೂ ಇರುತ್ತೆ; ಪರಮೇಶ್ವರ್‌ ಕೊಟ್ಟ ಎಚ್ಚರಿಕೆ ಯಾರಿಗೆ..?

ಬೆಂಗಳೂರು; ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ವ್ಯಕ್ತಿ ಅಥವಾ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ನಮ್ಮ ಪ್ರಣಾಳಿಕೆಯಲ್ಲೇ ಹೇಳಿದ್ದೇವೆ. ಯಾರು ಶಾಂತಿ ಕದಡೋದಿಲ್ಲವೋ ಅವರಿಗೆ ಯಾವುದೇ ಭಯ ಬೇಡ. ಶಾಂತಿ ಕದಡಿದರೆ ಅವರಿಗೆ ಭಯ ಆಗೇ ಆಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ತಮ್ಮ ಕೊಠಡಿಗೆ ಪೂಜೆ ಮಾಡಿದ ನಂತರ ಅವರು ಮಾತನಾಡಿದರು.

ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಇಲ್ಲಿ ಸೆಲ್ಯೂಟ್ ಸಿಗುತ್ತದೆ. ಒದೆನೂ ಸಿಗುತ್ತೆ, ಗುಂಡು ಹಾರಿಸೋದು ಕೂಡಾ ಇರುತ್ತದೆ. ಆದರೆ ಯಾರಿಗೆ ಯಾವುದು ಬೇಕೋ ತೀರ್ಮಾನ ಮಾಡಿ ಎಂದು ಪರಮೇಶ್ವರ್‌ ಹೇಳಿದರು. ಶಾಂತಿಯಿಂದ ರಾಜ್ಯ ನಡೆಸಬೇಕೋ, ಪೊಲೀಸರ ಆತಿಥ್ಯ ಸ್ವೀಕರಿಸಬೇಕೋ ನಿರ್ಧಾರ ಮಾಡಲಿ ಎಂದರು.

Share Post