BengaluruPolitics

ಬಿಬಿಎಂಪಿ ಗೆಲ್ಲಲು ಸಕಲ ತಯಾರಿ; 11 ಜನರ ಸಮಿತಿ ರಚಿಸಿದ ಕೆಪಿಸಿಸಿ

ಬೆಂಗಳೂರು; ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ನಡುವೆ ಕಾಂಗ್ರೆಸ್‌ ಪಕ್ಷ ಬಿಬಿಎಂಪಿ ಗೆಲ್ಲೋದಕ್ಕೆ ಸಕಲ ತಯಾರಿ ನಡೆಸಿದೆ. ಇದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು 11 ಜನರನ್ನೊಳಗೊಂಡ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ. ಶಾಸಕರು, ಸಚಿವರು ಕೂಡಾ ಇದರಲ್ಲಿದ್ದು, ಎಲ್ಲಾ ವಾರ್ಡ್‌ಗಳಲ್ಲ ಸ್ಥತಿಗತಿಗಳ ಅಧ್ಯಯನ ಮಾಡಿ ಇವರು ವರದಿ ನೀಡಲಿದ್ದಾರೆ.

ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾ ಕೃಷ್ಣ, ದಿನೇಶ್‌ ಗುಂಡೂರಾವ್‌, ರಾಮಲಿಂಗಾರೆಡ್ಡಿ ಸಮಿತಿಯಲ್ಲಿದ್ದಾರೆ. ಡಿ.ಕೆ.ಸುರೇಶ್‌, ಎನ್‌.ಎ.ಹ್ಯಾರಿಸ್‌, ಭೈರತಿ ಸುರೇಶ್‌, ಪೊನ್ನಪ್ಪ, ಪಿ.ಆರ್‌.ರಮೇಶ್‌, ರಮೇಶ್‌ ಬಾಬು, ಪದ್ಮಾವತಿ ಮುಂತಾದವರು ಸಮಿತಿಯಲ್ಲಿದ್ದಾರೆ. ಇವರು ವಾರ್ಡ್‌ಗಳ ಸ್ಥಿತಿಗತಿಗಳ ಬಗ್ಗೆ ವರದಿ ತಯಾರಿಸಲಿದ್ದಾರೆ. 15 ದಿನಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ.

Share Post