DistrictsPolitics

ಈಶ್ವರಪ್ಪ ಚರ್ಚೆ ಮಾಡುವ ಮೆಟೀರಿಯಲ್ ಅಲ್ಲ; ಡಿ.ಕೆ.ಶಿವಕುಮಾರ್

ಬೆಂಗಳೂರು; ನೆಮ್ಮದಿ ಶಾಂತಿಯುತ ಶಿವಮೊಗ್ಗಕ್ಕಾಗಿ ಬೆಂಬಲಿಸಿ ಅಂತ ಅವರದೇ ಆಯನೂರು ಬೋರ್ಡ್ ಹಾಕಿಕೊಂಡಿದ್ದಾರೆ. ಒಬ್ಬ ಎಂಎಲ್ಸಿಗೆ ನಾವು ಹೇಳುತ್ತಿದ್ದ ಸತ್ಯ ಅರ್ಥವಾಗಿದೆ ಅದಕ್ಕಾಗಿ ಅವರಿಗೆ ಸೆಲ್ಯೂಟ್ ಹಾಕ್ತೇವೆ ಎಂದು ಡಿ.ಕೆ ಶಿವಕುಮಾರ್ ಪ್ರತಿಕ್ರಿಸಿದರು.

ಶಿವಮೊಗ್ಗದಲ್ಲಿ ಶಾಂತಿ ಬಯಸಿರುವುದರಲ್ಲಿ ಏನಿದೆ ಎಂಬ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ, ಈಶ್ವರಪ್ಪ ನಮಗೆ ಅವರು ಚಚೆ೯ ಮಾಡುವ ಮೆಟಿರಿಯಲ್ ಅಲ್ಲ. ಅವರು ಇಡೀ ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು ಹೋಗಿದ್ದಾರೆ. ಶಿವಮೊಗ್ಗದ್ದಲ್ಲಿ 144 ಸೆಕ್ಷನ್ ಇದ್ರು ಝಂಡಾ ಹಿಡಿದುಕೊಂಡು ಬೀದಿಗೆ ಇಳಿದಿದ್ದರು. ಯಾರೊ ಬೇರೆಯವರು ಸತ್ತಾಗ ಒಂದು ರೂಪಾಯಿ ಕೊಡಲಿಲ್ಲ. ಆಮೇಲೆ (ಹರ್ಷ) ಇವರು ಸತ್ತಾಗ 15 ಲಕ್ಷ ಘೋಷಣೆ ಮಾಡ್ತಾರೆ. ಇರ್ಲಿ ಅವರನ್ನು ಅಭಿನಂದನೆ ಸಲ್ಲಿಸುತ್ತೇನೆ ಆಯನೂರು ಮಂಜುನಾಥ್ ಸತ್ಯ ನುಡಿದಿದ್ದಾರೆ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Share Post