Bengaluru

ಬೆಂಗಳೂರಿನ ಬಗ್ಗೆ ಮಾತನಾಡಿದ್ದ ಯುವತಿ ಕೆಲಸದಿಂದ ವಜಾ!

ಬೆಂಗಳೂರು; ಬೆಂಗಳೂರಿನಲ್ಲಿ ನಾವಿದ್ದರೆ ಮಾತ್ರ ಎಲ್ಲವೂ ನಡೆಯೋದು. ನಾವು ಬಿಟ್ಟು ಹೋದರೆ ಇಡೀ ಊರೇ ಖಾಗಿಯಾಗುತ್ತದೆ.. ಪಬ್‌ಗಳು, ಪಿಜಿಗಳು ಎಲ್ಲಾ ಖಾಲಿಯಾಗುತ್ತವೆ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಯುವತಿ ಈಗ ಕೆಲಸ ಕಳೆದುಕೊಂಡಿದ್ದಾಳೆ.. ಫ್ರೀಡಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ಸ್‌ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ ಸುಗಂಧ್‌ ಶರ್ಮ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.. ಈ ಮೂಲಕ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಜಯ ಸಿಕ್ಕಿದೆ..
ಇತ್ತೀಚೆಗೆ ರೀಲ್ಸ್‌ ಮಾಡಿದ್ದ ಸುಗಂಧ್‌ ಶರ್ಮಾ ಉತ್ತರ ಭಾರತದ ನಾವಿರೋದ್ರಿಂದಾನೇ ಬೆಂಗಳೂರು ಇದೆ.. ನಮ್ಮಿಂದಲೇ ಇಲ್ಲಿ ವ್ಯಾಪಾರ ವ್ಯವಹಾರ ನಡೆಯುತ್ತಿದೆ.. ನಾವಿಲ್ಲದಿದ್ದರೆ ಎಲ್ಲಾ ಖಾಲಿಯಾಗುತ್ತೆ ಎಂಬ ಧಾಟಿಯಲ್ಲಿ ಮಾತನಾಡಿದ್ದರು.. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು.. ಕನ್ನಡ ಪರ ಸಂಘಟನೆಗಳು ಕೂಡಾ ಇದರ ವಿರುದ್ಧ ಧ್ವನಿ ಎತ್ತಿದ್ದರು.. ಪರಿಸ್ಥಿತಿ ಅರಿತ ಸುಗಂಧ್‌ ಶರ್ಮಾ, ನನಗೆ ಕನ್ನಡ ಅಂದ್ರೆ ತುಂಬಾ ಇಷ್ಟ, ನಾನೂ ಕೂಡಾ ಕನನ್ಡ ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುವ ಮೂಲಕ ತಿಪ್ಪೆ ಸಾರುವ ಕೆಲಸ ಮಾಡಿದ್ದರು.. ಆದ್ರೆ ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಫ್ರೀಡಂ ಕಂಪನಿ ಆಕೆಯನ್ನು ಕೆಲಸದಿಂದ ಟರ್ಮಿನೇಟ್‌ ಮಾಡಿದೆ.. ಕನ್ನಡ ಪರ ಹೋರಾಟಗಾರ ರೂಪೇಶ್‌ ರಾಜಣ್ಣ ಅವರು ಫ್ರೀಡಂ ಕಂಪನಿಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ..
ಇದೇ ವೇಳೆ ಮಾತನಾಡಿರುವ ರೂಪೇಶ್‌ ರಾಜಣ್ಣ, ಸುಗಂಧ್‌ ಶರ್ಮಾ, ಬೆಂಗಳೂರಿನಲ್ಲಿ ಬೇರೆ ಯಾವುದೇ ಕಂಪನಿಯಲ್ಲಿ ಕೆಲಸ ನಿರ್ವಹಿಸಿದರೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸುಗಂಧ್‌ ಶರ್ಮಾ, ನೀವು ಯಾವಾಗಲೂ ಹೇಳ್ತಾ ಇರ್ತೀರಿ.. ಉತ್ತರ ಭಾರತೀಯರು ವಾಪಾಸ್‌ ಹೋಗಿ ಅಂತಾ. ಹಾಗೇನಾದರೂ ನಾವು ಬೆಂಗಳೂರು ಬಿಟ್ಟು ಹೋದರೆ, ನಿಮ್ಮ ಊರು ಪೂರ್ತಿ ಖಾಲಿಯಾಗಿ ಹೋಗುತ್ತದೆ. ಮೊದಲಿಗೆ ನಿಮ್ಮೆಲ್ಲರ ಪಿಜಿಗಳು ಖಾಲಿಯಾಗುತ್ತವೆ. ಅದರಿಂದ ಸಂಪಾದನೆಯಾಗುವ ಹಣ ನಿಮಗೆ ಸಿಗೋದಿಲ್ಲ. ಕೋರಮಂಗಲದ ಎಲ್ಲಾ ಕ್ಲಬ್‌ಗಳು ಖಾಲಿಯಾಗುತ್ತವೆ.. ಚಂದ ಚಂದನೆಯ ಹುಡುಗಿಯರು ಪಂಜಾಬಿ ಮ್ಯೂಸಿಕ್‌ಗೆ ಡಾನ್ಸ್‌ ಮಾಡೋಕೆ ಸಿಗೋದಿಲ್ಲ ಎಂದು ಹೇಳಿದ್ದರು.. ಈ ಮಾತುಗಳು ಕನ್ನಡಿಗರನ್ನು ಕೆರಳಿಸಿದ್ದವು.

Share Post