CrimeDistricts

ಕಾರು-ಬೈಕ್‌ ನಡುವೆ ಅಪಘಾತ; 5 ವರ್ಷದ ಮಗು ದಾರುಣ ಸಾವು!

ಮೈಸೂರು; ಮೈಸೂರಿನಲ್ಲಿ ಕಾರು ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದೆ.. ಘಟನೆಯಲ್ಲಿ ಬೈಕ್‌ನಲ್ಲಿದ್ದ 5 ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದೆ.. ಮೈಸೂರಿನ ಇಲವಾಲದಲ್ಲಿ ಈ ದಾರುಣ ಘಟನೆ ನಡೆದಿದೆ..
ಐದು ವರ್ಷ ಲಿಖಿತ್‌ ಎಂಬ ಮಗು ಸಾವನ್ನಪ್ಪಿದೆ.. ಇಲವಾದ ಪೆಟ್ರೋಲ್‌ ಬಂಕ್‌ ಬಳಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.. ಬೈಕ್‌ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದರಿಂದ ಬೈಕ್‌ನಲ್ಲಿ ಪೋಷಕರ ಜೊತೆ ಕುಳತಿದ್ದ ಮಗು ಸಾವನ್ನಪ್ಪಿದೆ.. ಅಪಘಾತದ ದೃಶ್ಯ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

Share Post