ನೀರಾವರಿ ವಿಚಾರದಲ್ಲಿ ಅನ್ಯಾಯಕ್ಕೆ ತುತ್ತಾದ ರಾಜ್ಯ ನಮ್ಮದೇ-ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಇಂದು ವಿಶ್ವ ಜಲ ದಿನಾಚರಣೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡುತ್ತಾ ನೀರಾವರಿ ವಿಚಾರವಾಗಿ ರಾಜ್ಯಕ್ಕೆ ಉಂಟಾಗಿರುವ ಅನ್ಯಾಯದ ಬಗೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ, ಮೇಕೆದಾಟು ವಿಚಾರದಲ್ಲಿ ಪ್ರತಿಬಾರಿ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ತಮಿಳುನಾಡಿಗೂ ಮೇಕೆದಾಟು ಯೋಜನೆಗೂ ಏನು ಸಂಬಂಧ..?ನಮ್ಮ ನೀರನ್ನು ನಾವು ಪಡೆದುಕೊಳ್ಳುವುದರಲ್ಲಿ ಸರ್ಕಾರ ಬದ್ಧತೆಯನ್ನು ತೋರಿಸಬೇಕು ಎಂದು ಬೆಂಗಳೂರಿನಲ್ಲಿ ಹೆಚ್‌ಡಿಕೆ ಹೇಳಿದ್ರು.
ಕರ್ನಾಟಕಕ್ಕಿಂತ ನೀರಾವರಿ ವಲಯದಲ್ಲಿ ಅನ್ಯಾಯಕ್ಕೆ ತುತ್ತಾದ ರಾಜ್ಯ ಮತ್ತೊಂದಿಲ್ಲ. ಎಪ್ಪತ್ತೈದು ವರ್ಷಗಳ ಈ ಅಸಹಾಯಕತೆ ಇನ್ನೆಷ್ಟು ದಿನ? ರಾಜ್ಯವನ್ನು ಜಲಶ್ಯಾಮಲಗೊಳಿಸಿ ಸಸ್ಯಶ್ಯಾಮಲವಾಗಿಸೋಣ. ಸಂಕಲ್ಪ ಮಾಡೋಣ. ಜಲಮೂಲಗಳನ್ನು ಜತನದಿಂದ ಸಂರಕ್ಷಿಸೋಣ. ರಾಜ್ಯದಲ್ಲಿ ಜಲ ಸಮಾನತೆ ಸಾಧಿಸೋಣ. ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕಕ್ಕಿಂತ ನೀರಾವರಿ ವಲಯದಲ್ಲಿ ಅನ್ಯಾಯಕ್ಕೆ ತುತ್ತಾದ ರಾಜ್ಯ ಮತ್ತೊಂದಿಲ್ಲ. ಎಪ್ಪತ್ತೈದು ವರ್ಷಗಳ ಈ ಅಸಹಾಯಕತೆ ಇನ್ನೆಷ್ಟು ದಿನ? ರಾಜ್ಯವನ್ನು ಜಲಶ್ಯಾಮಲಗೊಳಿಸಿ ಸಸ್ಯಶ್ಯಾಮಲವಾಗಿಸೋಣ. ಸಂಕಲ್ಪ ಮಾಡೋಣ.
ಜಲಮೂಲಗಳನ್ನು ಜತನದಿಂದ ಸಂರಕ್ಷಿಸೋಣ.
ರಾಜ್ಯದಲ್ಲಿ ಜಲ ಸಮಾನತೆ ಸಾಧಿಸೋಣ.ಎಲ್ಲರಿಗೂ ವಿಶ್ವ ಜಲದಿನದ ಶುಭಾಶಯಗಳು#ವಿಶ್ವಜಲದಿನ pic.twitter.com/Ypyl8VtgTF
— H D Kumaraswamy (@hd_kumaraswamy) March 22, 2022