BengaluruPolitics

ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರ ಅಂತ್ಯವಾಗುತ್ತೆ; ಬಿಜೆಪಿಗೆ ಸುರ್ಜೇವಾಲಾ 6 ಪ್ರಶ್ನೆ

ಬೆಂಗಳೂರು; ರಾಜ್ಯ ಬೊಮ್ಮಾಯಿ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅವರು ಮಾಧ್ಯಮ ಹೇಳಿಕೆ ನೀಡಿದ್ದು, ರಾಜ್ಯ ಬಿಜೆಪಿ ಸರ್ಕಾರವನ್ನು ಪಕ್ಷಾಂತರ ಹಾಗೂ ಭ್ರಷ್ಟಾಚಾರದ ತಳಹದಿಯ ಮೇಲೆ ಕಟ್ಟಲಾಗಿದೆ ಎಂದು ಆರೋಪಿಸಿದ್ದಾರೆ. 

ಈಡೇರದ ಭರವಸೆಗಳು, ಛಿದ್ರಗೊಂಡ ಕನಸುಗಳು ಈ ಸರ್ಕಾರದ ಅವಧಿ ಮುಗಿಯುತ್ತಿದ್ದಂತೆ ಕೊನೆಗೊಳ್ಳುತ್ತವೆ. ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ಮೂಲಕ ಈ ಲಜ್ಜೆಗೆಟ್ಟ ಸರ್ಕಾರ, ರಾಜ್ಯದ ಸಮಗ್ರತೆ, ಜವಾಬ್ದಾರಿ ಹಾಗೂ ಆಡಳಿತವನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

  #PayCM ಎಂಬ ಹ್ಯಾಶ್‌ಟ್ಯಾಗ್‌ನಿಂದ ಪ್ರಸಿದ್ಧರಾಗಿರುವ ಬಸವರಾಜ ಬೊಮ್ಮಾಯಿ ಮತ್ತು ಅವರ #40PercentSarkara 6.5 ಕೋಟಿ ಕನ್ನಡಿಗರ 6 ಪ್ರಶ್ನೆಗಳಿಗೆ ಉತ್ತರಿಸುವ ಸಮಯ ಬಂದಿದೆ ಎಂದು ಸುರ್ಜೇವಾಲಾ ಅವರು ಸರ್ಕಾರದ ಮುಂದೆ ಆರು ಪ್ರಶ್ನೆಗಳನ್ನಿಟ್ಟಿದ್ದಾರೆ. :

1. ಬೊಮ್ಮಾಯಿ ಸರ್ಕಾರ ತನ್ನ ಕೊನೆಯ ಬಜೆಟ್ ಅನ್ನು ಮಂಡಿಸುತ್ತಿದೆ. ಬಿಜೆಪಿ 2018 ರ ಪ್ರಣಾಳಿಕೆಯಲ್ಲಿ ನೀಡಲಾದ 600 ಭರವಸೆಗಳಲ್ಲಿ 91% ರಷ್ಟು ಈಡೇರಿಸಲು ವಿಫಲವಾಗಿದೆ ಏಕೆ?

2. ‘ರೈತು ಬಂಧು’ ಕಾರ್ಯಕ್ರಮಕ್ಕೆ ನೀಡಿದ 112 ಭರವಸೆಗಳಲ್ಲಿ 97 ಭರವಸೆಗಳನ್ನು ಈಡೇರಿಸಲು ಬಿಜೆಪಿ ಸರ್ಕಾರ ಏಕೆ ವಿಫಲವಾಗಿದೆ? ‘ಕೃಷಿ ಸಾಲ ಮನ್ನಾ’ ಭರವಸೆ ಏನಾಯಿತು? ನ್ಯಾಯಯುತ ಬೆಂಬಲ ಬೆಲೆ ಭರವಸೆ ಏನಾಯಿತು?

3. ‘ಮಹಿಳೆಯರಿಗೆ’ ನೀಡಿದ 26 ಭರವಸೆಗಳಲ್ಲಿ 24 ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ಸರಕಾರ ಏಕೆ ವಿಫಲವಾಗಿದೆ? ರೂ 10,000 ಕೋಟಿಯ ‘ಸ್ತ್ರೀ ಉನ್ನತಿ ನಿಧಿ’ ಏನಾಯಿತು? ಎಲ್ಲಿವೆ  ಬಾಲಕಿಯರಿಗೆ ನೀಡಬೇಕಾಗಿದ್ದ ಸ್ಮಾರ್ಟ್‌ಫೋನ್ ಗಳು..?

4. ಯುವಕರಿಗಾಗಿ ನೀಡಿದ್ದ 18 ಭರವಸೆಗಳಲ್ಲಿ 17 ಭರವಸೆಗಳನ್ನು ಯಾಕೆ ಇನ್ನೂ ಈಡೇರಿಸಿಲ್ಲ..? ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದಿದ್ದಿರಿ, ಅದು ಏನಾಯ್ತು..? ರಾಜ್ಯದಲ್ಲಿ 2,52,000 ಸರ್ಕಾರಿ ಹುದ್ದೆಗಳು ಇನ್ನೂ ಏಕೆ ಖಾಲಿ ಇವೆ..?  ನೀವು ಒಂದೇ ಒಂದು ‘ಪಿಯು ಕಾಲೇಜು’ ನಿರ್ಮಿಸಿಲ್ಲ ಏಕೆ? ‘ಪದವಿ ಹಂತದವರೆಗೆ ಉಚಿತ ಶಿಕ್ಷಣ’ ಎಂಬ ಭರವಸೆಯನ್ನು ಕಸದ ಬುಟ್ಟಿಗೆ ಎಸೆದಿದ್ದೀರಿ ಅಲ್ಲವೇ..?

5. SC/ST/OBC ಸಮುದಾಯಗಳಿಗೆ 2018 ರ ಪ್ರಣಾಳಿಕೆಯಲ್ಲಿ 81 ಭರವಸೆಗಳನ್ನು ನೀಡಲಾಗಿತ್ತು. ಆದ್ರೆ ಇದ್ರಲ್ಲಿ ಬಿಜೆಪಿ ಸರ್ಕಾರ 77 ಭರವಸೆಗಳನ್ನು ಈಡೇರಿಸದೆ ದ್ರೋಹ ಮಾಡಿದೆ..? SC/ST/OBC ವಿದ್ಯಾರ್ಥಿಗಳಿಗೆ 4500 ಕೋಟಿ ಮೌಲ್ಯದ ವಿದ್ಯಾರ್ಥಿವೇತನ ಭರವಸೆ ಏನಾಯ್ತು..? ಎಸ್‌ಸಿ/ಎಸ್‌ಟಿ/ಒಬಿಸಿಗೆ ರೂ 15,000 ಕೋಟಿ ಮೌಲ್ಯದ ಮನೆಗಳು ಕಟ್ಟಿಸುತ್ತೇವೆ ಎಂದಿದ್ದಿರಿ, ಆ ಭರವಸೆ ಏನಾಯಿತು..? ರೂ 7,000 ಕೋಟಿ SC/ST ಉಪ ಯೋಜನೆ ನಿಧಿಗಳನ್ನು ನೀಡದೇ ನೀವು ಎಸ್‌ಸಿ/ಎಸ್‌ಟಿಗಳನ್ನು ಏಕೆ ವಂಚಿಸಿದಿರಿ, ?

6. ‘ಶಿಕ್ಷಣ’ದಲ್ಲಿ ನೀಡಿದ 32 ಭರವಸೆಗಳಲ್ಲಿ 29, 40 ರಲ್ಲಿ 35 ಭರವಸೆಗಳನ್ನು ಈಡೇರಿಸಲು ಏಕೆ ವಿಫಲರಾಗಿದ್ದೀರಿ? ‘ಆರೋಗ್ಯ’ದಲ್ಲಿ ನೀಡಿದ ಭರವಸೆಗಳು, ‘ಮೂಲಸೌಕರ್ಯ’ದಲ್ಲಿ ನೀಡಲಾದ 48 ಭರವಸೆಗಳಲ್ಲಿ 40 ಯಾಕೆ ಈಡೇರಿಸಿಲ್ಲ ಎಂದು ಸುರ್ಜೇವಾಲಾ ಪ್ರಶ್ನೆ ಮಾಡಿದ್ದಾರೆ.

 

Share Post