ಕಾಂಗ್ರೆಸ್‌ನ 124 ರಲ್ಲಿ 30 ಕ್ಷೇತ್ರಗಳಲ್ಲಿ 50-50 ಚಾನ್ಸ್
ಬೆಂಗಳೂರು; ಕಾಂಗ್ರೆಸ್ ಈಗಾಗಲೇ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದ್ರೆ ಇದ್ರಲ್ಲಿ 76 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ಗೆ ಗೆಲ್ಲುವ ವಿಶ್ವಾಸವಿದೆಯಂತೆ. ಇನ್ನು 30 ಕ್ಷೇತ್ರಗಳಲ್ಲಿ 50-50 ಚಾನ್ಸ್ ಇದೆಯಂತೆ. ಉಳಿದ 18 ಕ್ಷೇತ್ರಗಳಲ್ಲಿ ಗೆಲ್ಲೋದು ಕಷ್ಟ ಎಂದು ಹೇಳಲಾಗುತ್ತಿದೆ. ಆಂತರಿಕ ಸಮೀಕ್ಷೆಯಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಈ ಮಾಹಿತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿಯಿಂದ ಎಲ್ಲಾ ಅಭ್ಯರ್ಥಿಗಳಿಗೆ ಸೂಚನೆಯೊಂದು ಬಂದಿದೆಯಂತೆ.
30 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ 50-50 ಚಾನ್ಸ್ ಇದೆಯಂತೆ. ಹೀಗಾಗಿ ಈ ಅಭ್ಯರ್ಥಿಗಳು ಪ್ರಚಾರಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಲಾಗಿದೆಯಂತೆ. ಆರು ಮಂದಿ ಹಾಲಿ ಶಾಸಕರು ಕೂಡಾ ಸೋಲಿನ ಭೀತಿ ಎದುರಿಸುತ್ತಿದ್ದು, ಹೈಕಮಾಂಡ್ ಎಚ್ಚರಿಕೆಯಿಂದ ಪ್ರಚಾರ ಮಾಡುವಂತೆ ಸೂಚನೆ ನೀಡಿದೆಯಂತೆ. ಇದರ ಜೊತೆಗೆ ಟಿಕೆಟ್ ಪಡೆದಿರುವ ನಾಲ್ವರು ಮಾಜಿ ಶಾಸಕರಿಗೆ ಕೂಡಾ ಮತ್ತೆ ಸೋಲಿನ ಭೀತಿ ಇದೆಯಂತೆ. ಹೀಗಾಗಿ ಇವರೆಲ್ಲಾ ಕ್ಷೇತ್ರದಲ್ಲಿ ಅತಿಹೆಚ್ಚು ಒತ್ತು ನೀಡಿ ಪ್ರಚಾರ ಮಾಡಬೇಕು ಎಂದು ಸೂಚಿಸಲಾಗಿದೆಯಂತೆ.
ಹಳೆಮೈಸೂರು ಭಾಗದ ಮೂವರು ಹಾಲಿ ಶಾಸಕರಿಗೆ ಫಿಫ್ಟಿ ಫಿಫ್ಟಿ ಚಾನ್ಸ್ ಇದೆಯಂತೆ. ಉತ್ತರ ಕರ್ನಾಟಕ ಭಾಗದ ಇಬ್ಬರು, ಮಲೆನಾಡು ಭಾಗದ ಒಬ್ಬ ಹಾಲಿ ಶಾಸಕರಿಗೆ ಹೈಕಮಾಂಡ್‌ನಿಂದ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನ ಹಾಲಿ ಶಾಸಕರೊಬ್ಬರಿಗೂ ಫಿಫ್ಟಿ ಫಿಫ್ಟಿ ಚಾನ್ಸ್ ಇದೆಯಂತೆ.