BengaluruPolitics

ಪ್ಯಾರೀಸ್‌ ತರಾ ಒಂದು ರೋಡ್‌ ಮಾಡಿಸಿ ಸಾಕು; ಸರ್ಕಾರಕ್ಕೆ ಡಿಕೆಶಿ ಸವಾಲು

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿಯುವರು ಪ್ಯಾರೀಸ್‌ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದರು. ಸದ್ಯಕ್ಕೆ ಪ್ಯಾರೀಸ್‌ ಮಾದರಿ ಬೇಡ, ಪ್ಯಾರೀಸ್‌ ತರಾ ಒಂದೇ ಒಂದು ರಸ್ತೆ ಮಾಡಿಸಿ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದರು ಅವರು, ಬಿಜೆಪಿಯವರಿಗೆ ಆಡಳಿತ ಮಾಡೋದಕ್ಕೆ ಬರೋದಿಲ್ಲ. ಭ್ರಷ್ಟಾಚಾರ ಮಾಡೋದ್ರಲ್ಲಿ ಅವರು ನಿಸ್ಸೀಮರು ಎಂದು ಹೇಳಿದ್ದಾರೆ.

ಇನ್ನು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಸ್ತೆ ಟೋಲ್‌ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್‌, ಮೈಸೂರು ಬೆಂಗಳೂರು ಹೈವೆಯಲ್ಲಿ ಸರ್ವಿಸ್ ರೋಡೇ ಇಲ್ಲ. ಟೋಲ್ ಯಾಕೆ ಕೊಡಬೇಕು..? ಎಂದು ಪ್ರಶ್ನಿಸಿದ್ದಾರೆ. ಸರ್ವಿಸ್ ರೋಡ್‌ ಕೊಡದೆ ನೀವು ಟೋಲ್ ಸಂಗ್ರಹ ಮಾಡೋ ಹಾಗಿಲ್ಲ. ಆಲ್ಟರ್ನೇಟಿವ್ ಸರ್ವಿಸ್ ಕೊಟ್ಟು ನಂತರ ನೀವು ಟೋಲ್ ಕಲೆಕ್ಟ್ ಮಾಡಿ ಎಂದು ಆಗ್ರಹಿಸಿದ್ದಾರೆ.

Share Post