Bengaluru

ಆಪ್‌ ಆಧಾರಿತ ಆಟೋ ಸೇವೆ ನಿಲ್ಲಿಸಿ; ಸಾರಿಗೆ ಇಲಾಖೆಯಿಂದ ನೋಟಿಸ್‌

ಬೆಂಗಳೂರು; ಇನ್ಮೇಲೆ ಆಪ್‌ ಆಧಾರಿತ ಆಟೋ ಸೇವೆ ಬೆಂಗಳೂರಿನಲ್ಲಿ ಇರೋದಿಲ್ಲ. ಯಾಕಂದ್ರೆ, ಆಪ್‌ ಆಧಾರಿತ ಆಟೋ ಸೇವೆ ನಿಲ್ಲಿಸುವಂತೆ ಸಾರಿಗೆ ಇಲಾಖೆ ಉಬರ್‌ ಹಾಗೂ ಓಲಾ ಕಂಪನಿಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳು ಆಟೋ ರಿಕ್ಷಾಗಳ ಸೇವೆ ಒದಗಿಸುವುದು ಕಾನೂನು ಬಾಹಿರ. ಯಾಕಂದ್ರೆ, ಅನ್ ಡಿಮ್ಯಾಂಡ್‌ ಟ್ರಾನ್ಸ್‌ಪೊರ್ಟೇಷನ್‌ ಟೆಕ್ನಾಲಜಿ ಅಗ್ರಿಗೇಟರ್ಸ್‌ ನಿಯಮಾವಳಿ–2016ರ ಪ್ರಕಾರ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ಕಂಪನಿಗಳಿಗೆ ಪರವಾನಗಿ ಕೊಡಲಾಗಿದೆ. ಟ್ಯಾಕ್ಸಿ ಎಂದರೆ ಚಾಲಕ ಹೊರತುಪಡಿಸಿ ಆರು ಜನರಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ವಾಹನ ಆಗಿರಬಾರದು ಎಂದು ಷರತ್ತು ವಿಧಿಸಲಾಗಿದೆ.

ಆದ್ರೆ ಆಟೋರಿಕ್ಷಾ ಸೇವೆಗಳನ್ನೂ ಈ ಕಂಪನಿಗಳು ನೀಡುತ್ತಿವೆ. ಜೊತೆಗೆ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿವೆ. ಹೀಗಾಗಿ ಆಟೋರಿಕ್ಷಾ ಸೇವೆ ಕೂಡಲೇ ನಿಲ್ಲಿಸಬೇಕು ಎಂದು ಸಾರಿಗೆ ಆಯುಕ್ತರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

Share Post