CrimeNational

ಉತ್ತರಕಾಶಿಯಲ್ಲಿ ಭಾರಿ ಹಿಮಪಾತ; ಇದುವರೆಗೆ 26 ಮಂದಿ ಮೃತದೇಹ ಪತ್ತೆ

ಉತ್ತರಕಾಶಿ; ಉತ್ತರಾಖಂಡದ ಉತ್ತರ ಕಾಶಿಯಲ್ಲಿ ಹಿಮಪಾತ ಹೆಚ್ಚಾಗಿದ್ದು, ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಹಿಮಪಾತದಲ್ಲಿ ಸಿಲುಕಿ ಸಾವನ್ನಪ್ಪಿದ 26 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಹದಿನೈದಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಅಕ್ಟೋಬರ್​ 4ರಂದು ನೆಹರೂ ಪರ್ವತಾರೋಹಣ ಸಂಸ್ಥೆಯ 40 ಜನ ಪರ್ವತಾರೋಹಿಗಳ ತಂಡ ಪರ್ವತಾರೋಹಣಕ್ಕೆ ತೆರಳಿತ್ತು. ಈ ವೇಳೆ, ಹಿಮಕುಸಿತ ಉಂಟಾಗಿತ್ತು. ದುರಂತ ನಡೆದ ಮೊದಲ ದಿನವೇ 10 ಪರ್ವತಾರೋಹಿಗಳು ಮೃತಪಟ್ಟಿದ್ದರು. ಆದರೆ, ಪ್ರತಿಕೂಲ ಹವಾಮಾನ ಹಾಗೂ ಹಿಮಪಾತದ ಬಿರುಕುಗಳಲ್ಲಿ ಪರ್ವತಾರೋಹಿಗಳು ಸಿಲುಕಿರುವ ಕಾರಣ ರಕ್ಷಣಾ ಕಾರ್ಯಕ್ಕೆ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.

   ನಿನ್ನೆಯವರೆಗೆ ಒಟ್ಟು 16 ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಇದರಲ್ಲಿ ಇಬ್ಬರು ತರಬೇತುದಾರರು ಮತ್ತು 14 ಪ್ರಶಿಕ್ಷಣಾರ್ಥಿಗಳು ಸೇರಿದ್ದರು ಎಂದು ತಿಳಿದುಬಂದಿದೆ. ಇಂದು 7 ಪರ್ವತಾರೋಹಿಗಳ ಮೃತದೇಹಗಳು ಸಿಕ್ಕಿವೆ. ಇದರಿಂದಾಗಿ ಒಟ್ಟಾರೆ ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

Share Post