CrimeNational

ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಮೇಲೆ ವಾರ್ಡ್‌ಬಾಯ್‌ ಅತ್ಯಾಚಾರ!

ಕೋಲ್ಕತ್ತ; ಕೋಲ್ಕತ್ತಾದ ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ.. ಹೀಗಿರುವಾಗಲೇ ಅದೇ ಕೋಲ್ಕತ್ತಾದಲ್ಲಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಆಸ್ಪತ್ರೆ ನೌಕರನೊಬ್ಬ ಅತ್ಯಾಚಾರ ಎಸಗಿದ್ದಾನೆ..
ಕೋಲ್ಕತ್ತಾದ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ.. ಮಗನಿಗೆ ತೀವ್ರ ಅನಾರೋಗ್ಯ ಹಿನ್ನೆಯಲ್ಲಿ ತಾಯಿ ಮಕ್ಕಳ ಆರೋಗ್ಯ ಸಂಸ್ಥೆಗೆ ದಾಖಲು ಮಾಡಿದ್ದಳು.. ರಾತ್ರಿ ಮಗ ಪಕ್ಕದಲ್ಲಿ ಮಲಗಿದ್ದಾಗ ಸ್ಥಳಕ್ಕೆ ಬಂದ ಆಸ್ಪತ್ರೆ ವಾರ್ಡ್‌ಬಾಯ್‌ 26 ವರ್ಷದ ತನಯ್‌ ಪಾಲ್‌ ಎಂಬಾ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.. ಮಲಗಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿ, ಆಕೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ಎಸಗಲಾಗಿದೆ.. ಈ ಬಗ್ಗೆ ಮಹಿಏ ನೀಡಿದ ದೂರು ಆಧರಿಸಿ ಆರೋಪಿಯನ್ನು ಅರೆಸ್ಟ್‌ ಮಾಡಲಾಗಿದೆ..
ಪೊಲೀಸರು ಆರೋಪಿ ತನಯ್‌ ಪಾಲ್‌ ಮೊಬೈಲ್‌ ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪರೀಕ್ಷೆ ಕಳುಹಿಸಿಕೊಟ್ಟಿದ್ದಾರೆ.. ನಂತರ ಆತನನ್ನು ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ..

ಶಾಸಕರ ಮನೆಯಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ!

ಲಕ್ನೋ; ಮನೆಗೆಲಸ ಮಾಡುವ ಅಪ್ರಾಪ್ತ ಬಾಲಕಿ ಶಾಸಕರೊಬ್ಬರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಮತ್ತೊಬ್ಬ ಬಾಲಕಾರ್ಮಿಕಳನ್ನು ರಕ್ಷಣೆ ಮಾಡಲಾಡಗಿದೆ.. ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರ ಆಪ್ತ ಶಾಸಕರಲ್ಲಿ ಒಬ್ಬರಾದ ಭಾದೋಹಿಯಾ ಕ್ಷೇತ್ರದ ಶಾಸಕ ಜಾಹಿದ್‌ ಬೇಗ್‌ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ..
ಅಪ್ರಾಪ್ತರನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ.. ಆದ್ರೆ ಶಾಸಕನೇ ತನ್ನ ಮನೆಯಲ್ಲಿ ಅಪ್ರಾಪ್ತ ಬಾಲಕಿಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ.. ಅದರಲ್ಲಿ ಒಬ್ಬ ಬಾಲಕಿ ನೇಣಿಗೆ ಶರಣಾಗಿದ್ದಾಳೆ.. ಹೀಗಾಗಿ ಶಾಸಕ ಜಾಹಿದ್‌ ಬೇಗ್‌ ವಿರುದ್ಧ ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಯುನಿಟ್ ಕೇಸ್‌ ದಾಖಲಿಸಿದೆ.. ಶೀಘ್ರದಲ್ಲೇ ಶಾಸಕ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.. ಘಟನೆಯ ತೀವ್ರತೆ ಗೊತ್ತಾಗುತ್ತಿದ್ದ ಶಾಸಕ ಹಾಗೂ ಅವರ ಪತ್ನಿ ಪರಾರಿಯಾಗಿದ್ದಾರೆ.. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..
ಭದೋಹಿ ನಗರದ ಶಾಸಕರ ನಿವಾಸದಲ್ಲಿ ಬಾಲಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.. ಮಾರನೇ ದಿನ ಅದೇ ಮನೆಯಲ್ಲಿ ಮತ್ತೊಬ್ಬ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.. ಹೀಗಾಗಿ ಶಾಸಕ ಹಾಗೂ ಅವರ ಪತ್ನಿ ವಿರುದ್ಧ ಎರಡನೇ ಎಫ್‌ಐಆರ್‌ ಕೂಡಾ ದಾಖಲಿಸಲಾಗಿದೆ.. ಸೆಕ್ಷನ್ 143 (4), 143 (5), ಸೆಕ್ಷನ್ 79 ಮತ್ತು ಸೆಕ್ಷನ್ 4 ಮತ್ತು 16 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಲೆಕ್ಟ್ರಿಕ್‌ ಬಸ್‌ ಡಿಕ್ಕಿಯಾಗಿ 25 ವರ್ಷದ ಯುವತಿ ದುರ್ಮರಣ!

Share Post