Bengaluru

ಸಂಜೆ 6.30ಕ್ಕೆ ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಅಂತ್ಯಕ್ರಿಯೆ

ಬೆಂಗಳೂರು: ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ ಅಂತ್ಯಕ್ರಿಯೆ ಸಂಜೆ 6.30ಕ್ಕೆ ನಡೆಯಲಿದೆ. ಸೌಂದರ್ಯ ಅವರ ತಂದೆ ಹುಬ್ಬಳ್ಳಿಯಿಂದ ಆಗಮಿಸುತ್ತಿದ್ದು, 6.30ರ ವೇಳೆಗೆ ಅಬ್ಬಿಗೆರೆ ಆಗಮಿಸಲಿದ್ದಾರೆ. ಸೌಂದರ್ಯ ತಂದೆ ಬಂದ ನಂತರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಸೌಂದರ್ಯ ಪತಿ ಡಾ.ನೀರಜ್‌ ಅವರ ಫಾರಂ ಹೌಸ್‌ನಲ್ಲಿ ಅಂತ್ಯಕ್ರಿಯೆಗೆ ಈಗಾಗಲೇ ಎಲ್ಲಾ ಸಿದ್ಧತೆಗಳೂ ನಡೆದಿವೆ. ನೂರಾರು ಬಂಧುಗಳು, ಮಿತ್ರರು ಆಗಮಿಸಿದ್ದಾರೆ. ಅವರ ತಂದೆ ಬಂದ ಕೂಡಾ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

Share Post