Bengaluru

ಮೊಮ್ಮಗಳ ಮೃತದೇಹ ನೋಡಿ ಬಿಎಸ್‌ವೈ ಕಣ್ಣೀರು; ಹಣೆಗೆ ಮುತ್ತಿಟ್ಟ ಯಡಿಯೂರಪ್ಪ

ಬೆಂಗಳೂರು;  ಬೆಂಗಳೂರು ಉತ್ತರ ತಾಲ್ಲೂಕಿನ ಅಬ್ಬಿಗೆರೆಯಲ್ಲಿ ಯಡಿಯೂರಪ್ಪ ಮೊಮ್ಮಗಳ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ. ಪತಿ ನೀರಜ್‌ ಅವರ ಫಾರಂ ಹೌಸ್‌ನಲ್ಲಿ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಮೃತದೇಹ ನೋಡಿ ಕಣ್ಣೀರು ಹಾಕಿದಾರೆ.

ಆಸ್ಪತ್ರೆಯಿಂದ ಫಾರಂ ಹೌಸ್‌ಗೆ ಮೃತದೇಹ ಬರುತ್ತಿದ್ದಂತೆ ಯಡಿಯೂರಪ್ಪ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಂತರ ಮೊಮ್ಮಗಳ ಹಣೆ ಮುತ್ತಿಟ್ಟಿದ್ದಾರೆ.

Share Post