BengaluruCrime

ಕುಡಿದ ಮತ್ತಲ್ಲಿ ಪೊಲೀಸರೊಂದಿಗೆ ಜಗಳಕ್ಕಿಳಿದ ಪ್ರಸಾದ್‌ ಬಿದ್ದಪ್ಪ ಪುತ್ರ

ಬೆಂಗಳೂರು;  ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ  ಕುಡಿದ ಮತ್ತಿನಲ್ಲಿ ಕಿರಿಕಿರಿ ಮಾಡಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಲ್ಲದೆ, ಹಾರ್ನ್ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ. ಕಳೆದ ರಾತ್ರಿ ಯಲಹಂಕದಲ್ಲಿ ಈ ಘಟನೆ ನಡೆದಿದೆ.

ಈ ಗಲಾಟೆಯನ್ನು ನೋಡಿ ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಬಂದಿದ್ದಾರೆ.  ಈ ವೇಳೆ ಬಿದ್ದಪ್ಪ ಪುತ್ರ ಆಡಂ ಪೊಲೀಸರ ಜೊತೆಗೂ ವಾಗ್ವಾದ ಮಾಡಿದ್ದಾರೆ. ಬಳಿಕ ಅವಿವಾ ಬಿದ್ದಪ್ಪಗೆ ಕರೆ ಮಾಡಿ ಪೊಲೀಸರೊಂದಿಗೆ ಮಾತಾಡುವಂತೆ ಹೇಳಿದ್ದಾನೆ. ಈ ವೇಳೆ ಪೊಲೀಸರು ನೀನು ಯಾರಿಗಾದರೂ ಕರೆ ಮಾಡು ಎಂದು ಹೇಳಿ ಆತನನ್ನು ವಶಕ್ಕೆ ಪಡೆದಿದ್ದಾರೆ.

 

Share Post