CrimeDistricts

ಹನಿಟ್ರ್ಯಾಪ್‌ಗೆ ಬಡಹೆಣ್ಣು ಮಕ್ಕಳ ದುರ್ಬಳಕೆ!; ಸಂತ್ರಸ್ತೆಯರ ಕಣ್ಣೀರು!

ಕಲಬುರಗಿ; ಅಧಿಕಾರಿಗಳು, ಉದ್ಯಮಿಗಳನ್ನು ಹನಿಟ್ರ್ಯಾಪ್‌ ಮಾಡಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ ಒಂದು ಬಯಲಿಗೆ ಬಂದಿದೆ. ಕಲಬುರಗಿಯಲ್ಲಿ ಸಕ್ರಿಯವಾಗಿದ್ದ ಈ ಗ್ಯಾಂಗ್‌ ಹಲವು ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮಿಗಳನ್ನು ಬಲೆಗೆ ಬೀಳಿಸಿ ಬ್ಲ್ಯಾಕ್‌ ಮೇಲ್‌ ಮಾಡಿ ಹಣ ವಸೂಲಿ ಮಾಡಿದೆ ಎಂದು ತಿಳಿದುಬಂದಿದೆ..
ಬಡ ಹಾಗೂ ಅಮಾಯಕ ಯುವತಿಯರನ್ನು ಬಳಸಿಕೊಂಡು ಈ ದಂಧೆ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ.. ದಲಿತ ಸೇನೆಯ ಹಣಮಂತ ಯಳಸಂಗಿ, ಪ್ರಭು ಹಿರೇಮಠ, ರಾಜು ಲೆಂಗಟಿ ಸೇರಿ ಒಟ್ಟು 8 ಮಂದಿ ಸಂತ್ರಸ್ತೆಯೊಬ್ಬರು ಕೇಸ್‌ ದಾಖಲು ಮಾಡಿದ್ದಾರೆ.. ಸೋಷಿಯಲ್‌ ಮೀಡಿಯಾ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಗ್ಯಾಂಗ್‌ ಅವರಿಗೆ ಹಣದ ಆಮಿಷ ಒಡ್ಡುತ್ತಿತ್ತು.. ಅವರ ಆರ್ಥಿಕ ಪರಿಸ್ಥಿತಿಯನ್ನೇ ಲಾಭ ಮಾಡಿಕೊಳ್ಳುತ್ತಿದ್ದ ಗ್ಯಾಂಗ್‌ ಅವರನ್ನು ಬಳಸಿಕೊಂಡು ಹನಿಟ್ರ್ಯಾಪ್‌ ಮಾಡಿಸುತ್ತಿತ್ತು ಎಂದು ಆರೋಪಿಸಲಾಗಿದೆ..
ಸಂತ್ತಸ್ತ ಯುವತಿಯರೇ ಈ ಬಗ್ಗೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.. ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಸುಮಾರು 10 ಹೆಚ್ಚು ಯುವತಿಯರನ್ನು ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾಗಿದೆ ಎಂದು ಯುವತಿಯರು ಆರೋಪ ಮಾಡಿದ್ದಾಳೆ.. ಈ ಬಗ್ಗೆ ಕಲಬುರಗಿಯಲ್ಲಿ ದೂರು ದಾಖಲಾಗಿದೆ..

Share Post