Bengaluru

ಸಚಿವರು ಸಮ್ಮುಖದಲ್ಲೇ ಕಲ್ಲು ತೂರಾಟ ಮಾಡ್ತಾರಂದ್ರೆ ಏನರ್ಥ-ಸಿದ್ದು ಸಿಡಿಮಿಡಿ

ಬೆಂಗಳೂರು: ನಿನ್ನೆ ಹಿಂದೂ ಕಾರ್ಯಕರ್ತ ಹರ್ಷನ ಪಾರ್ಥಿವ ಶರೀರ ಮೆರವಣಿಗೆ ವೇಳೆ ಉಂಟಾದ ಗದ್ದಲದ ಬಗ್ಗೆ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಇದೆಲ್ಲದಕ್ಕೂ ಬಿಜೆಪಿಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಾದ್ಯಂತ 144 ಸೆಕ್ಷನ್‌ ಜಾರಿ ಮಾಡಲಾಗಿದೆ.  ಒಬ್ಬ ಮಂತ್ರಿನೇ 144ಸೆಕ್ಷನ್‌ ಗೌರವಿಸದೇ ಉಲ್ಲಂಘನೆ ಮಾಡಿದ್ದಾರೆ. ಸಚಿವರೇ ಸರ್ಕಾರದ ಆದೇಶವನ್ನು ಪಕ್ಕಕ್ಕೆ ಸರಿಸಿ ಮೆರವಣಿಗೆ ಹೋಗ್ತಾರಂದ್ರೆ  ಸರ್ಕಾರ ಏನ್‌ ಮಾಡ್ತಿದೆ..? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಸರ್ಕಾರವನ್ನು ಗೂಂಡಾಗಳ ಸರ್ಕಾರ ಅನ್ನಬೇಕು.  ಯಡಿಯೂರಪ್ಪ, ರಾಘವೇಂದ್ರ ಯಡಿಯೂರಪ್ಪ, ಈಶ್ವರಪ್ಪನವರೇ ನೇರ ಹೊಣೆ ಎಂದು ಆರೋಪ ಮಾಡಿದ್ದಾರೆ. ಕಲ್ಲು ತೂರಾಟ, ಬೆಂಕಿ ಹಚ್ಚಿದ್ದಾರೆ, ಗಾಜು ಪುಡಿ ಪುಡಿ ಮಾಡಿದ್ದಾರೆ, ಲಾಂಗು ಮಚ್ಚುಗಳಿಂದ ತಲ್ವಾರ್‌ಗಳಿಂದ ವಿಜೃಂಭಿಸಿದ್ದಾರೆ. ಅವರ ನಡುವೆ ಈಶ್ವರಪ್ಪ ಮೆರವಣಿಗೆ ನಡೆಸುತ್ತಾರೆ ಅಂದ್ರೆ ಏನಾಗ್ತಿದೆ ಸಮಾಜ. ಕಲ್ಲು ತೂರಾಟ ಇವರ ಎದುರೇ ನಡೆದರೂ ಅದನ್ನು ಏಕೆ ತಡೆಯಲಿಲ್ಲ..?  ಶಿವಮೊಗ್ಗದಲ್ಲಿ ಉದ್ವಿಗ್ನ ಸ್ಥಿತಿಗೆ ಆರ್‌ಎಸ್‌ಎಸ್‌, ಭಜರಂಗದಳ, ಕಾರಣ. ಇದರ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Share Post