Bengaluru

Hijab Row: ಹೈಕೋರ್ಟ್‌ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ-ಅಂತಿಮ ತೀರ್ಪು ನೀಡುತ್ತಾ ಪೂರ್ಣ ಪೀಠ..?

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹಿಜಾಬ್‌ ವಿವಾದ ಕಾವೇರುತ್ತಲೇ ಇದೆ. ಬರುಬರುತ್ತಾ ಕಿಚ್ಚು ಹೊತ್ತಿ ಉರಿಯುತ್ತಿದೆ. ಶಮನ ಮಾಡಲು ಕೋರ್ಟ್‌ ಹಾಗೂ ಸರ್ಕಾರ ಏನೇ ಆದೇಶ ಮಾಡಿದ್ರೂ ಆದೇಶಗಳನ್ನು ಗಾಳಿಗೆ ತೂರಿ ಮತ್ತದೇ ದಾರಿಯಲ್ಲಿ ಮುಂದುವರೆದಿದೆ. ಕಳೆದ ಹತ್ತು ದಿನಗಳಿಂದ ಹಿಜಾಬ್‌ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಇಂದು ಕೂಡ ಅರ್ಜಿ ವಿಚಾರಣೆ ಶುರುವಾಗಿದ್ದು, ತ್ರಿಸದಸ್ಯ ಪೀಠ ಅಂತಿಮ ತೀರ್ಪು ನೀಡುತ್ತಾ ಎಂದು ರಾಜ್ಯದ ಜನ ಕಾಯುತ್ತಿದ್ದಾರೆ. ಸಿಜೆ ರಿತುರಾಜ್‌ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್‌, ನ್ಯಾ.ಖಾಜಿ ಜೈಬುನ್ನೀಸ್‌ ಮೊಹಿಯುದ್ದೀನ್‌ ಪೀಠ ಅರ್ಜಿ ವಿಚಾರಣೆ ನಡೆಸುತ್ತಿದೆ.

CJ: ಒಂದೇ ವಾಧವನ್ನು ಪುನರಾವರ್ತನೆ ಮಾಡಬಾರದು, ಅಲ್ಲಾ ಮಧ್ಯಂತರ ಅರ್ಜಿ ವಿಚಾರಣೆ ಸಾಧ್ಯವಿಲ್ಲ. ಈ ಅರ್ಜಿಗಳಿಂದ ಕೋರ್ಟ್‌ ಸಮಯ ವ್ಯರ್ಥವಾಗುತ್ತಿದೆ. ಒಂದು ಅರ್ಜಿಗೆ ಒಬ್ಬರೇ ವಾದ ಮಾಡಬೇಕು ಎಂದು ಸಿಜೆ ಅಭಿಪ್ರಾಯ ಪಟ್ಟಿದ್ದಾರೆ.
ವಕೀಲ ಸುಭಾಷ್‌ ಜಾ
ತೀರ್ಪಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಹೈಕೋರ್ಟ್‌ ವಿಚಾರಣೆಯನ್ನು ಎಲ್ಲರೂ ನೋಡುತ್ತಿದ್ದಾರೆ. ಶೀಘ್ರ ವಾದ ಮಂಡಿಸಲು ವಕೀಲ ಸುಭಾಷ್‌ ಜಾ ಮನವಿ ಮಾಡಿಕೊಂಡಿದ್ದಾರೆ.
ರವಿವರ್ಮ ಕುಮಾರ್‌
ಸಮವಸ್ತ್ರವನ್ನು ಐದು ವರ್ಷಗಳ ಕಾಲ ಬದಲಿಸಬಾರದು, ಒಮ್ಮೆ ನಿಗದಿ ಮಾಡಿದ್ರೆ ಐದು ವರ್ಷ ಬದಲಿಸುವಂತಿಲ್ಲ. ಬದಲಿಸುವಾಗ ಒಂದು ವರ್ಷದ ಮುನ್ನ ನೊಟೀಸ್‌ ನೀಡಬೇಕು. ಪೋಷಕರಿಗೆ ನೋಟೀಸ್‌ ನೀಡಬೇಕೆನ್ನುವ ನಿಯಮವಿದೆ. ಹಿಜಾಬ್‌ ವಿಚಾರದಲ್ಲೂ ನೊಟೀಸ್‌ ನೀಡಬೇಕಿತ್ತು. ಪೋಷಕರು, ಶಿಕ್ಷಕರ ಸಮಿತಿ ರಚಿಸಲು ಅವಕಾಶವಿದೆ. ಕಾಲೇಜು ಅಭಿವೃದ್ಧಿ ಸಮಿತಿಗೆ ಈ ನಿಯಮವಿಲ್ಲ.
ಸಿಜೆ: ನಿನ್ನೆ ನೀವು ಹೇಳಿದ ವಿಚಾರವನ್ನು ನಾವು ನೋಟ್‌ ಮಾಡಿದ್ದೇವೆ
ರವಿವರ್ಮ ಕುಮಾರ್:‌ ಪಿಯು ಕಾಲೇಜಿನಲ್ಲಿ ಈ ಸಾಲಿಗೆ ಸಮವಸ್ತ್ರ ನಿಗದಿ ಪಡಿಸಿಲ್ಲ ಯಾರು ಈ ಮಾರ್ಗಸೂಚಿ ಹೊರಡಿಸಿದ್ದಾರೆಂದು ಮಾಹಿತಿಯಿಲ್ಲ. 2020-21ರ ಪಿಯು ಶಿಕ್ಷಣ ನೀತಿಯಲ್ಲಿ ಈ ಬಗ್ಗೆ ಮಾಹಿತಿಯಿಲ್ಲ. ಹಾಗಾಗಿ ಇದ್ನನು ಮಾರ್ಗಸೂಚಿ ಎಂದು ಕರೆಯುವುದು ಹೇಗೆ..?

Share Post