Bengaluru

ಕಾಂಗ್ರೆಸ್‌ ನಾಯಕರ ಪ್ರತಿಭಟನೆ ಹಿನ್ನೆಲೆ ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ವಿಧಾನಸಭೆ: ಸದನದಲ್ಲಿ ಕಾಂಗ್ರೆಸ್‌ ನಾಯಕರ ಗದ್ದಲ, ಗಲಭೆ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನನು ಸೋಮವಾರ ಬೆಳಗ್ಗೆ 11ಗಂಟೆಗೆ ಮುಂದೂಡಿಕೆ ಮಾಡಲಾಗಿದೆ. ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸದನವನ್ನು ಮುಂದೂಡಿಕೆ ಮಾಡಿದ್ದಾರೆ.

ರಾಷ್ಟ್ರಧ್ವಜ ಹೇಳಿಕೆ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪರನ್ನು ಸದನದಿಂದ ವಜಾ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದೆ. ಅಹೋರಾತ್ರಿ ಧರಣಿ ನಡೆಸಿದ ಕಾಂಗ್ರೆಸ್‌ ಬೆಳಗ್ಗೆ ಸದನದಲ್ಲೂ ತಮ್ಮ ಬೇಡಿಕೆ ಈಡೇರಿಸುವಂತೆ ಧರಣಿ ನಡೆಸಿದ್ರು. ವಜಾ ಮಾಡುವವರೆಗೂ ಹೋರಾಟ ಕೈ ಬಿಡಿವುದಿಲ್ಲ ಎಂದು ಕೈ ನಾಯಕರು ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್‌ ನಾಯಕರ ಧರಣಿ ನಡುವೆಯೇ ಪ್ರಶ್ನೋತ್ತರ ಸಂದರ್ಭ  ಸ್ಪೀಕರ್ ನಡೆಸಿದ್ರು. ಮುಖ್ಯಮಂತ್ರಿ ಸೇರಿದಂತೆ ಇತರೆ ಬಿಜೆಪಿ ಶಾಸಕರು ಧರಣಿ ಮಾಡದಂತೆ ಮನವಿ ಮಾಡಿದ್ರೂ ಪ್ರಯೋಜನವಾಗಲಿಲ್ಲ. ಸ್ವತಃ ಸ್ಪೀಕರ್‌ ಸದನ ನಡೆಸಲು ಅನುವು ಮಾಡಿಕೊಂಡಿ ಎಂದರೂ ಯಾರ ಮಾತಿಗೂ ಜಗ್ಗದ ಕಾಂಗ್ರೆಸ್‌ ನಾಯಕರು ಜಗ್ಗದ ಕಾರಣ ಕಲಾಪವನ್ನು ಸೋಮವಾರಕ್ಕೆ ಮಂದೂಡಿದ್ದಾರೆ.

Share Post