ಗ್ರಾಹಕರ ಚಿನ್ನವನ್ನು ಗುಳುಂ ಮಾಡಿದ ಮ್ಯಾನೇಜರ್-ಬೆಟ್ಟಿಂಗ್‌ನಲ್ಲಿ 14.5ಕೆ.ಜಿ.ಬಂಗಾರ ಹೂಡಿಕೆ
ಹೈದರಾಬಾದ್: ಬ್ಯಾಂಕ್‌ನಲ್ಲಿ ತಮ್ಮ ಹಣ ಇಟ್ರೆ ಸೇಫಾಗಿರುತ್ತೆ ಅಂತ ಜನ ಲಾಕರ್‌ಗಳಲ್ಲಿ ಜೋಪಾನವಾಗಿ ಇಡುತ್ತಾರೆ. ಅಥವಾ ಕಲೆವರು ಕಷ್ಟ ಎಂದ ಕೂಡಲೇ ಚಿನ್ನ ಅಡವಿಟ್ಟು ಹಣ ಪಡೆಯುತ್ತಾರೆ. ಕೇವಲ ಭದ್ರತೆಯ ದೃಷ್ಟಿಯಿಂದ ಜನ ಹೀಗೆ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಬ್ಯಾಂಕ್ ಮ್ಯಾನೇಜರ್ ಅಡವಿಟ್ಟ ಚಿನ್ನವನ್ನ ಸ್ವಂತದ್ದೆನ್ನುವ ಹಾಗೆ ಬಳಸಿ ಬ್ಯಾಂಕ್ ಹೆಸರಿಗೆ ಮಸಿ ಬಳಿದಿದ್ದಾನೆ. ಸದ್ಯ ಕಿರಾತಕ ಬ್ಯಾಂಕ್ ಮ್ಯಾನೇಜರ್ ಪೊಲೀಸರ ಅತಿಥಿಯಾಗಿದ್ದಾನೆ.
ಮೇಡ್ಜಲ್ ಜಿಲ್ಲೆ ಕೇಸರದಲ್ಲಿ ಇರುವ ಐಐಎಫ್‌ಎಲ್(IIFL) ಬ್ಯಾಂಕ್‌ನ ಮ್ಯಾನೇಜರ್ ರಾಜ್‌ಕುಮಾರ್ ಎಂಬಾತ ಗ್ರಾಹಕರು ತಮ್ಮ ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನವನ್ನು ಬೆಟ್ಟಿಂಗ್‌ಗಾಗಿ ಬಳಸಿಕೊಂಡಿದ್ದಾನೆ. ಕೋಟಿ ಲೆಕ್ಕದಲ್ಲಿ ಶುರುವಾಗುವ ಕ್ರಿಕೆಟ್‌ಗೆ ಬೆಟ್ಟಿಂಗ್‌ಗೆ ಹಣವಿಲ್ಲದ ಕಾರಣ ತನ್ನ ವಕ್ರದೃಷ್ಟಿ ತಾನು ಕಾಲಸ ಮಾಡುವ ಬ್ಯಾಂಕ್ ಮೇಲೆ ಬಿದ್ದಿದೆ. ಗ್ರಾಹಕರ ಅಡವಿಟ್ಟ ಚಿನ್ನದಲ್ಲಿ ಬರೋಬ್ಬರಿ 14.5ಕೆ.ಜಿ ಚಿನ್ನವನ್ನು ಬೇರೆ ಬ್ಯಾಂಕಿನಲ್ಲಿ ಅಡವಿಟ್ಟು ಅಲ್ಲಿಂದ ಕೋಟಿಗಟ್ಟಲೆ ಹಣವನ್ನು ಪಡೆದಿದ್ದಾನಂತೆ.
ಈ ಬಗ್ಗೆ ಮಾಹಿತಿ ಪಡೆದ IIFL ಮುಖ್ಯ ಶಾಖೆ ಈತನ ವಿರುದ್ಧ ಪ್ರಕರಣ ದಾಖಲಿಸಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ತಮ್ಮ ಚಿನ್ನವನ್ನು ಕಳೆದುಕೊಂಡಿರುವ ಗ್ರಾಹಕರು ತಮ್ಮ ಚಿನ್ನ ವಾಪಸ್ ನೀಡುವಂತೆ ಒತ್ತಾಯ ಮಾಡ್ತಿದ್ದಾರೆ.