BengaluruCrime

ಹೆತ್ತ ಮಗುವನ್ನೇ 4ನೇ ಮಹಡಿಯಿಂದ ಕೆಳಗೆಸೆದ ದಂತವೈದ್ಯೆ..!

ಬೆಂಗಳೂರು; ದಂತ ವೈದ್ಯೆಯೊಬ್ಬಳು ತನ್ನ ನಾಲ್ಕು ವರ್ಷ ಮಗಳನ್ನು ನಾಲ್ಕನೇ ಮಹಡಿಯಿಂದ ಕೆಳಗೆಸೆದು ಕೊಂದಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಪಂಗಿ ರಾಮನಗರದ ಅದಿತ್ವ ಅಪಾರ್ಟ್‌ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಜೀತಿ ಎಂದು ಗುರುತಿಸಲಾಗಿದೆ.

ತಾಯಿ ತನ್ನ ಮಗಳನ್ನು ಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ಭಯಾನಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೀತಿ ಬುದ್ಧಿಮಾಂದ್ಯಳಾಗಿದ್ದಳು ಎಂದು ತಿಳಿದುಬಂದಿದೆ. ಇನ್ನು ದಂತ ವೈದ್ಯೆ ಸುಷ್ಮಾ ಇತ್ತೀಚೆಗಷ್ಟೇ ತನ್ನ ಗಂಡನನ್ನು ಕಳೆದುಕೊಂಡಿದ್ದಳು. ಜೊತೆಗೆ ಮಗಳು ಬುದ್ಧಿಮಾಂಧತ್ಯೆಯಿಂದ ಬಳಲುತ್ತಿದ್ದರಿಂದ ಸುಷ್ಮಾ ಖಿನ್ನತೆಗೆ ಒಳಗಾಗಿದ್ದಳು ಎಂದು ಗೊತ್ತಾಗಿದೆ.

ಮಗಳನ್ನು ಕಂಕುಳಲ್ಲಿ ಇರಿಸಿಕೊಂಡು ಬಂದ ಸುಷ್ಮಾ, ಏನೋ ತೋರಿಸುವ ಹಾಗೆ ಮಾಡಿ ನಾಲ್ಕನೇ ಮಹಡಿಯಿಂದ ಕೆಳಗೆಸೆದಿದ್ದಾಳೆ. ಅನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವೇಳೆ ಅಕ್ಕಪಕ್ಕದ ಮನೆಯವರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.

Share Post