BengaluruCrime

ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್‌ ಸ್ಟಾರ್‌ ಖ್ಯಾತಿಯ ಬಾಲಕಿ ಸಮನ್ವಿ ಸಾವು

ಬೆಂಗಳೂರು: ಮಕ್ಕಳು ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ ಅವರ ಮುದ್ದು-ಪೆದ್ದು ಮಾತುಗಳು ಎಲ್ಲರ ಮನಸೂರೆಗೊಳಿಸುತ್ತವೆ. ಮಕ್ಕಳು ಅಂದ್ರೆನೆ ಮುಗ್ದತೆ, ಸಹಜತೆ, ಸತ್ಯ ಇಂತಹ ಮಕ್ಕಳು ಹಾಗೂ ಅಮ್ಮಂದಿರ ನಡುವೆ ಪೈಪೋಟಿ ನಡೆಸಲು ಕಲರ್ಸ್‌ ಕನ್ನಡ ವಾಹಿನಿಯವರು ʻನನ್ನಮ್ಮ ಸೂಪರ್‌ ಸ್ಟಾರ್‌ʼ ರಿಯಾಲಿಟಿ ಶೋ  ಪ್ರಾರಂಭ ಮಾಡಿದ್ರು. ಈ ಶೋನಲ್ಲಿ ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳು ಸಮನ್ವಿ. ತಾಯಿ ಅಮೃತಾ ಸ್ಪರ್ಧಿಗಳಾಗಿದ್ರು.  ಆದರೆ ದುರಾದಷ್ಟವಶಾತ್‌  ರಸ್ತೆ ಅಪಘಾತದಲ್ಲಿ ಪುಟ್ಟ ಬಾಲಕಿ ಸಾವನ್ನಪ್ಪಿದ್ದು. ತಾಯಿ ಅಮೃತಾ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ.  ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸ್ಕೂಟಿ ಮೇಲೆ ಸಮನ್ವಿ ಹಾಗೂ ಅಮೃತಾ ತೆರಳುತ್ತಿದ್ದಾಗ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಬಾಲಕಿ ಸಮನ್ವಿ ಸಾವನನ್ನಪ್ಪಿದ್ದಾಳೆ. ಗಾಯಗೊಂಡ ಅಮೃತಾಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕುಮಾರಸ್ವಾಮಿ ಲೇಔಟ್‌ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಆಟವಾಡುವ ವಯಸ್ಸಲ್ಲಿ ವಿಧಿ ತನ್ನ ಕ್ರೂರತೆ ಮೆರೆದಿದೆ. ಶೊನಲ್ಲಿ ಪೆದ್ದು ಪೆದ್ದು ಮಾತುಗಳನ್ನಾಡಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದ ಸಮನ್ವಿ ಸಾವು ದುರಂತವೇ ಸರಿ.

Share Post