Bengaluru

ಕೊರೊನಾ ಇಳಿಮುಖ ಹಿನ್ನೆಲೆ, ನಿಯಮಗಳ ಸಡಿಲಿಕೆ ಬಗ್ಗೆ ತೀರ್ಮಾನ?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ವೈರಸ್‌ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ವಿಧಿಸಿರುವ ಕೊರೊನಾ ನಿಯಮಾವಳಿಗಳನ್ನು  ಸಡಿಲಿಕೆ ಮಾಡುವ ಬಗ್ಗೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದೆ. ಈ ಬಗ್ಗೆ ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾತನಾಡಿದ ಸಿಎಂ, ಕೋವಿಡ್ ವಸ್ತು ಸ್ಥಿತಿ ಅವಲೋಕಿಸಿ ಈಗಿರುವ ನಿಯಮಗಳನ್ನು ಸಡಿಲಿಸುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೋವಿಡ್ ವಸ್ತುಸ್ಥಿತಿಯ ಅವಲೋಕನಕ್ಕಾಗಿ ಇಂದು ಸಭೆಯನ್ನು ಕರೆಯಲಾಗಿದೆ. ಕಳೆದ ಒಂದು ತಿಂಗಳಿನಿಂದ ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಕೋವಿಡ್ ನ ಪರಿಸ್ಥಿತಿಯನ್ನು ಪರಿಶೀಲಿಸಿ ಹಾಗೂ ತಜ್ಞರ ಸಮಿತಿ ವರದಿಯ ಆಧಾರದ ಮೇಲೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊರೊನಾ ಇಳಿಮುಖವಾದ್ದರಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು  ಶಾಲೆಗಳನ್ನು ತೆರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಜ್ಯದಲ್ಲಿ ವಿಧಿಸಿರುವ ನೈಟ್‌ ಕರ್ಫ್ಯೂ ಹಾಗೂ  ಹೊಟೇಲ್‌, ಬಾರ್‌ ಅಂಡ್ವ ರೆಸ್ಟೋರೆಂಟ್‌ಗಳಿಗೆ ವಿಧಿಸಿರುವ 50-50ರೂಲ್ಸ್‌ ಹಿಂಪಡೆಯುವಂತೆ ಈಗಾಗಲೇ ಹೊಟೇಲ್‌ ಮಾಲೀಕರು, ವರ್ತಕರು ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಇಂದು ಸಭೆ ಕರೆದು ನಿಯಮ ಸಡಿಲಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

Share Post