National

ಭದ್ರತಾ ಲೋಪಕ್ಕೆ ವಿಷಾದವ್ಯಕ್ತಪಡಿಸಿದ ಸಿಎಂ ಚನ್ನಿ, ಕ್ಷಮೆಯಾಚನೆ

ಪಂಜಾಬ್:‌ ಇಂದು ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಸಂಬಂಧ ನಡೆಸಿದ ಸಭೆಯಲ್ಲಿ ಪಂಜಾಬ್‌ ಸಿಎಂ ಚರಣ್‌ಜಿತ್‌ ಕ್ಷಮೆ ಕೋರಿದ್ದಾರೆಂಬ ಮಾಹಿತಿಯಿದೆ. ಡಿಸೆಂಬರ್‌ ೫ರಂದು ಪ್ರಧಾನಿ ಪಂಜಾಬ್‌ಗೆ ತೆರಳಿದ್ದ ವೇಳೆ ಭದ್ರತಾ ವೈಫಲ್ಯ ಕುರಿತು ವಿಷಾದ ವ್ಯಕ್ತಪಡಿಸಿ ದೀರ್ಘಾಯುಷ್ಯವಾಗಿರಿ ಎಂದು ಹಾರೈಸಿದ್ದಾರೆಂಬ ಸುದ್ದಿ ಹರಿದಾಡ್ತಿದೆ.

ಇದಕ್ಕೂ ಮೊದಲು ಭದ್ರತಾ ಲೋಪದ ಬಗ್ಗೆ ಹೊಣೆಗಾರಿಕೆ ತೆಗೆದುಕೊಳ್ಳದೆ ತಳ್ಳಿಹಾಕಿದ ಸಿಎಂ ಈಗ ಇದ್ದಕ್ಕಿದ್ದಂತೆ ಕ್ಷಮೆ ಕೋರಿರುವುದು ಆಶ್ಚರ್ಯವನ್ನುಂಟುಮಾಡಿದೆ. ಮುಂದುವರಿದು ಕಾರಣ ನೀಡಿರುವ ಚನ್ನಿ ನನ್ನ ಸೆಕ್ರೆಟರಿಗೆ ಕೋವಿಡ್‌ ಆದ ಕಾರಣ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ನನಗೆ ಸಾಧ್ಯವಾಗಲಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಪ್ರಧಾನಿ ಪಂಜಾಬ್‌ ಭೇಟಿ ವೇಳೆ ನಡೆದ ಘಟನೆ ಅತ್ಯಂತ ದುರದೃಷ್ಟಕರ, ನಮ್ಮ ಪೊಲೀಸರು ರೈತರ ಪ್ರತಿಭಟನೆಗಳನ್ನು ಹತ್ತಿಕ್ಕಲು ಅವಿರತ ಶ್ರಮ ವಹಿಸಿದ್ದಾರೆ. ಪ್ರಧಾನಿಗಾಗಿ ಸರ್ಕಾರದ ವತಿಯಿಂದ ಭದ್ರತಾ ವ್ಯವಸ್ಥೆ ಕಲ್ಪಸಿದ್ರೂ ಕೂಡ ಮಾರ್ಗ ಬದಲಾವಣೆಯಿಂದಾಗಿ ಇಂತಹ ದೋಷಪೂರಿತ ಘಟನೆ ನಡೆಯುವುದಕ್ಕೆ ದಾರಿ ಮಾಡಿಕೊಟ್ಟಿದೆ. ಆದರೆ ಭದ್ರತೆಯಲ್ಲಿ ಯಾವುದೇ ಲೋಪ ಉಂಟಾಗಿಲ್ಲ ಎಂದು ವಿವರಣೆಯನ್ನು ನೀಡಿದ್ರು.

ಪ್ರಧಾನಿ ಪಂಜಾಬ್‌ ಭೇಟಿ ವೇಳೆ ರೈತರ ಪ್ರತಿಭಟನೆಯಿಂದಾಗಿ ಫ್ಲೈ ಓವರ್‌ ಮೇಲೆಯೇ ಇಪ್ಪತ್ತು ನಿಮಿಷ ಕಾಯುವ ಪರಿಸ್ಥಿತಿ ಉಂಟಾಗಿತ್ತು. ರಾಜ್ಯಾದ್ಯಂತ ಇದು ಪ್ರಧಾನಿಯವರಿಗೆ ಸಂದ ಗೌರವ ಅಲ್ಲ. ಇದಕ್ಕೆ ಪಂಜಾಬ್‌ ಮುಖ್ಯಮಂತ್ರಿಯೇ ನೇರ ಹೊಣೆ ಎಂದು ಟೀಕಿಸಲಾಗಿತ್ತು. ಜೊತೆಗೆ ರಾಷ್ಟ್ರಪತಿ ಆಳ್ವಿಕೆ ತರುವುದಕ್ಕೆ ರಾಜ್ಯಪಾಲರಿಗೆ ಪತ್ರ ಕೂಡ ರವಾನೆಯಾಗಿತ್ತು. ಎಲ್ಲದಕ್ಕಿಂತ ಮುಕ್ಯವಾಗಿ ಪ್ರಧಾನಿಯವರು ನಾಣು ಜೀವಂತವಾಗಿ ಏರ್ಪೋರ್ಟ್‌ವರೆಗೂ ಬಂದೆನಲ್ಲ ಎಂದು ಹೇಳಿಕೊಂಡಿದ್ರು. ಮುಂದಿನ ತಿಂಗಳು ವಿಧಾನಸಭೆ ಚುನಾವಣೆ  ಬೆನ್ನಲ್ಲೇ ಪಂಜಾಬ್‌ ಸಿಎಂ ಕ್ಷಮೆ ಕೋರಿದ್ದಾರೆ.

 

Share Post