BengaluruCinema

ಧರ್ಮದ ಹೆಸರಲ್ಲಿ ದೌರ್ಜನ್ಯ ವಿಚಾರ; ಸಾಯಿ ಪಲ್ಲವಿ ಪರ ನಿಂತ ರಮ್ಯಾ

ಬೆಂಗಳೂರು; ಸಂದರ್ಶನವೊಂದರಲ್ಲಿ ಖ್ಯಾತ ಬಹುಭಾಷಾ ನಟಿ ಸಾಯಿ ಪಲ್ಲಿವಿ ಕಾಶ್ಮೀರಿ ಫೈಲ್ಸ್‌ ಚಿತ್ರ ಪ್ರಸ್ತಾಪಿಸಿ, ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯಕ್ಕೂ, ಗೋವುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯ ಮೇಲೆ ಮಾಡಿದ ದೌರ್ಜನ್ಯಕ್ಕೂ ವ್ಯತ್ಯಾಸವೆಲ್ಲಿದೆ..? ಧರ್ಮ ಅಡ್ಡ ತರುವ ಬದಲು ಯಾರ ಮೇಲೆಯೇ ದೌರ್ಜನ್ಯ ನಡೆದರೂ ಅದು ದೌರ್ಜನ್ಯವೇ ಎಂದು ಹೇಳಿದ್ದರು. ಈ ಹೇಳಿಕೆಯಿಂದಾಗಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಸ್ಯಾಂಡಲ್‌ ಬ್ಯೂಟಿ ಕ್ವೀನ್‌ ರಮ್ಯಾ, ನಟಿ ಸಾಯಿ ಪಲ್ಲವಿ ಪರ ನಿಂತಿದ್ದಾರೆ.

   ಧರ್ಮ ಮತ್ತು ದೇವರ ಹೆಸರಿನಲ್ಲಿ ಮನುಷ್ಯರ ಮೇಲೆ ಹಲ್ಲೆ ಮಾಡುವುದು ತಪ್ಪು ಎಂದು ಹೇಳಿದ್ದ ಸಾಯಿ ಪಲ್ಲವಿ, ದಿ ಕಾಶ್ಮೀರ್ ಫೈಲ್ಸ್ ಚಿತ್ರ ಹಾಗೂ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆಯನ್ನು ಹೋಲಿಕೆ ಮಾಡಿದ್ದರು. ಈ ಮಾತುಗಳಿಗೆ ಬೆಂಬಲ ಸೂಚಿಸಿರುವ ಸ್ಯಾಂಡಲ್‌ ವುಡ್‌ ಕ್ವೀನ್ ರಮ್ಯಾ, ತುಳಿತಕ್ಕೊಳಗಾದವರನ್ನು ರಕ್ಷಿಸಬೇಕು. ಸತ್ಯ ಹೇಳುವ ಧೈರ್ಯ ತೋರಿದ ನಿಮಗೆ ಅಭಿನಂದನೆಗಳು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ತುಳಿಕ್ಕೊಳಗಾದವರನ್ನು ರಕ್ಷಿಸಬೇಕು ಎಂದು ಸಾಯಿ ಪಲ್ಲವಿ ಸಂದರ್ಶನದಲ್ಲಿ ಹೇಳಿದ್ದರು. ಅದನ್ನೇ ಪುನಃ ಬರೆಯುವ ಮೂಲಕ ರಮ್ಯ ಸಾಯಿ ಪಲ್ಲವಿ ಮಾತುಗಳಿಗೆ ಬೆಂಬಲ ನೀಡಿದ್ದಾರೆ.

ಕಾಶ್ಮೀರದಲ್ಲಿ ಒಂದು ಕಾಲದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮಾಡಲಾಗಿತ್ತು. ಒಂದು ವೇಳೆ ನೀವು ಇದನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡುವಿರಾದರೆ, ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆಯಲಾಯಿತು ಹಾಗೂ ಆತನಿಗೆ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ ಮಾಡಲಾಯಿತು. ಈ ಎರಡೂ ಘಟನೆಗಳಿಗೆ ವ್ಯತ್ಯಾಸವೆಲ್ಲಿದೆ?. ಒಂದು ಘಟಿಸಿಹೋಗಿದೆ. ಇನ್ನೊಂದು ವರ್ತಮಾನದಲ್ಲಿ ನಡೆದಿದೆ ಎಂದು ಸಂದರ್ಶನದಲ್ಲಿ ಸಾಯಿ ಪಲ್ಲವಿ ಹೇಳಿದ್ದರು.

Share Post