ಪೊಲೀಸ್ ಅಧಿಕಾರಿ ಶರ್ಟ್ ಕಾಲರ್ ಹಿಡಿದ ರೇಣುಕಾ ಚೌಧರಿ
ಹೈದರಾಬಾದ್; ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಹುಲ್ ಗಾಂಧಿಯವರನ್ನು ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯಿತು. ಅದೇ ರೀತಿಯ ತೆಲಂಗಾಣದ ಹೈದರಾಬಾದ್ ರಾಜಭವನ ಮುಂದೆ ದೊಡ್ಡ ಹೈಡ್ರಾಮಾನೇ ನಡೆದುಹೋಯಿತು. ಈ ವೇಳೆ ಕಾಂಗ್ರೆಸ್ ನಾಯಕಿ ರೇಣುಕಾಚೌಧರಿಯವರು ಪೊಲೀಸ್ ಅಧಿಕಾರಿಯೊಬ್ಬರ ಶರ್ಟ್ ಕಾಲರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರ ಘಟನೆ ಕೂಡಾ ನಡೆಯಿತು.
ತೆಲಂಗಾಣದ ರಾಜಭವನದ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸುತ್ತಿದ್ದರು. ಆಗ ಅದೇನಾಯಿತೋ ಏನೋ ಇದ್ದಕ್ಕಿಂತೆ ರೇಣುಕಾಚೌಧರಿ ಅವರು ಪೊಲೀಸ್ ಅಧಿಕಾರಿಯೊಬ್ಬರ ಶರ್ಟ್ ಕಾಲರ್ ಹಿಡಿದು ವಾಗ್ವಾದಕ್ಕಿಳಿದರು. ಆಗ ಸ್ಥಳಕ್ಕೆ ಬಂದ ಮಹಿಳಾ ಪೊಲೀಸರು ರೇಣುಕಾಚೌಧರಿಯನ್ನು ಸಮಾಧಾನ ಮಾಡಿ ಕರೆದುಕೊಂಡು ಹೋದರು.