Cinema

ವಾರದಲ್ಲಿ 229 ಕೋಟಿ ಗಳಿಸಿದ ಪುಷ್ಪ

ಹೈದರಾಬಾದ್‌ : ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪುಷ್ಪ ಸಿನಿಮಾ ಪ್ಯಾನ್‌ ಇಂಡಿಯಾ ತೆರೆ ಕಂಡು ಯಶಸ್ವಿಯಾಗಿ ಮುನ್ನುಗುತ್ತಿದೆ. ವಿದೇಶಗಳಲ್ಲಿಯೂ ಹೌಸ್‌ಫುಲ್‌ ಕಾಣುತ್ತಿರುವ ಪುಷ್ಪ ಒಂದೇ ವಾರದಲ್ಲಿ ೨೨೯ ಕೋಟಿ ರೂ ಗಳಿಕೆ ಮಾಡಿದೆ.

ಮೊದಲ ವಾರ ಮುಗಿಸಿ ಎರಡನೇ ವಾರಕ್ಕೆ ಕಾಲಿಡುತ್ತಿರುವ ಪುಷ್ಪ ಸಿನಿಮಾದ ಗಳಿಕೆ ಬಗ್ಗೆ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಚಿತ್ರತಂಡವೇ ಮಾಹಿತಿ ಹಂಚಿಕೊಂಡಿದೆ.

Share Post