ನಾಳೆಯಿಂದ ಗೃಹಜ್ಯೋತಿ ಯೋಜನೆಗೆ ನೋಂದಣಿ; ಅರ್ಜಿ ಸಲ್ಲಿಕೆ ತುಂಬಾ ಸುಲಭ
ಬೆಂಗಳೂರು; ಮುಂದಿನ ತಿಂಗಳ 1ನೇ ತಾರೀಖಿನಿಂದ ಗೃಹಜ್ಯೋತಿ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ಇದಕ್ಕೆ ಅರ್ಜಿ ಸಲ್ಲಿಕೆ ಜೂನ್ 15ರಿಂದಲೇ ಆರಂಭವಾಗಬೇಕಿತ್ತು. ಆದ್ರೆ ತಾಂತ್ರಿಕ ಕಾರಣದಿಂದ ಆಗಿರಲಿಲ್ಲ. ಇದೀಗ ನಾಳೆಯಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಸೇವಾ ಸಿಂಧು ಪೋರ್ಟಲ್‌ನಲ್ಲಿ ಎಲ್ಲಾ ಬದಲಾವಣೆಗಳನ್ನೂ ಮಾಡಲಾಗದ್ದು, ಅರ್ಜಿ ಸಲ್ಲಿಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. https://sevasindhugss.karnataka.gov.in ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾ.ಪಂ. ಕಚೇರಿ, ವಿದ್ಯುತ್ ಕಚೇರಿಗಳಲ್ಲಿ ನೋಂದಾಯಿಸಲು ಅವಕಾಶವಿದೆ.
ಮೊಬೈಲ್‌ನಲ್ಲಿ ಇಂಟರ್‌ನೆಟ್ ಇದ್ದರೆ, ಅಥವಾ ಕಂಪ್ಯೂಟರ್, ಲ್ಯಾಪ್ ಟಾಪ್ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದು. ಆಧಾರ್ ಕಾರ್ಡ್ ಆರ್‌ಆರ್ ನಂಬರ್, ಮೊಬೈಲ್ ಸಂಖ್ಯೆ ಹಾಘು ಮನೆ ಬಾಡಿಗೆ ಕರಾರು ಪತ್ರಗಳನ್ನು ಈ ಅಪ್ಲಿಕೇಷನ್ ಜೊತೆಗೆಎ ಅಪ್‌ಲೋಡ್ ಮಾಡಬೇಕಿರುತ್ತದೆ. ಬಾಡಿಗೆದಾರರು ಹೊಸಬರಾಗಿದ್ದರೂ ಅರ್ಜಿ ಸಲ್ಲಿಕೆ ಮಾಡಬಹುದು. ಬಾಡಿಕೆ ಕರಾರು ಪತ್ರ, ಆರ್‌ಆರ್ ನಂಬರ್ ಇದ್ದರೆ ಅದಕ್ಕೆ ನಿಮ್ಮ ಕರ್ನಾಟಕದ ಯಾವುದೇ ಅಡ್ರೆಸ್ ಹೊಂದಿರುವ ಆಧಾರ್ ಕಾರ್ಡ್ ಇದ್ದರೂ ನಡೆಯುತ್ತದೆ.
ಏನಾದರೂ ಕನ್ಫ್ಯೂಷನ್ಸ್ ಇದ್ದರೆ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಬಹುದು.