ಶವಪೆಟ್ಟಿಗೆಯಲ್ಲಿ ಎದ್ದು ಕುಳಿತ ವೃದ್ಧೆ; ನಂತರ ನಡೆದದ್ದೇನು ಗೊತ್ತಾ..?
ಈಕ್ವೆಡಾರ್; ಈಕ್ವೆಡಾರ್‌ನಲ್ಲಿ ವಾರದ ಹಿಂದೆ ವೃದ್ಧೆಯೊಬ್ಬರು ಸಾವನ್ನಪ್ಪಿದ್ದರು. ವೈದ್ಯರು ಕೂಡಾ ವೃದ್ಧೆಯ ಸಾವನ್ನ ದೃಢಪಡಿಸಿದ್ದರು. ಹೀಗಾಗಿ ಅವರ ದೇಹವನ್ನು ಶವಪೆಟ್ಟಿಗೆಯಲ್ಲಿಟ್ಟು ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಅಂತ್ಯಕ್ರಿಯೆ ಮಾಡಬೇಕು ಎನ್ನುವಷ್ಟರಲ್ಲಿ ವೃದ್ಧೆ ಎದ್ದು ಕುಳಿತಿದ್ದರು. ಇದೊಂದು ಪವಾಡ ಅಂತಾನೇ ಎಲ್ಲರೂ ಭಾವಿಸಿದ್ದರು. ಆದ್ರೆ ವಾರದ ನಂತರ ಮತ್ತೆ ದುರ್ಘಟನೆ ನಡೆದಿದೆ.
76 ವರ್ಷದ ಬೆಲ್ಲಾ ಮೊಂಟೊಯಾ ವಾರದ ಹಿಂದೆ ಶವಪೆಟ್ಟಿಗೆಯಿಂದ ಎದ್ದು ಬಂದಿದ್ದರು. ಅದಾದ ನಂತರ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾಗಿಲ್ಲ. ಇದೀಗ ಅವರು ನಿಜವಾಗಿಯೂ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಂದಿದೆ. ಸಾವು ಗೆದ್ದು ಬಂದ ನಂತರ ಬೆಲ್ಲಾ ಅವರಿಗೆ ಲಕ್ವಾ ಹೊಡೆದಿತ್ತು. ಹೀಗಾಗಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮೊದಲು ಬೆಲ್ಲಾ ಅವರಿಗೆ ಕ್ಯಾಟಲೆಪ್ಸಿ ಸಮಸ್ಯೆ ಇತ್ತು. ಜೂನ್ 9ರಂದು ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಣೆ ಮಾಡಿದ್ದರು. ಹೀಗಾಗಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಶವಪೆಟ್ಟಿಗೆಯಲ್ಲಿ ದೇಹವನ್ನು ಇಟ್ಟಿದ್ದರು. ಈ ವೇಳೆ ಬೆಲ್ಲಾ ಅವರು ಎದ್ದು ಕುಳಿತಿದ್ದರು.