ಕೊನೆಗೂ ಸಿಕ್ಕಿಬಿದ್ದ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿ
ಬೆಂಗಳೂರು: ಮಾರ್ಚ್ 1 ರಂದು ಬೆಂಗಳೂರು ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಉಗ್ರ ಕೊನೆಗೂ ಅರೆಸ್ಟ್ ಆಗಿದ್ದಾರೆ. ಒಂದೂವರೆ ತಿಂಗಳ ನಂತರ ಬಾಂಬ್ ಇಟ್ಟಿದ್ದ ಶಂಕಿತನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಶಾಜೀನ್ ಹುಸೇನ್ ಎಂಬ ಉಗ್ರ ಬಾಂಬ್ ಇಟ್ಟವನಾಗಿದ್ದು ಆತನನ್ನು ಬಂಧಿಸಲಾಗಿದೆ.ಮುಸಾಫೀರ್ ಶಾಜೀನ್ ಹುಸೇನ್ನನ್ನು ಉತ್ತರ ಭಾರತದ ರಾಜ್ಯದಲ್ಲಿ ಅರೆಸ್ಟ್ ಮಾಡಲಾಗಿದೆ.
ಮುಸಾಫೀರ್ ಶಾಜೀನ್ ಹುಸೇನ್ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಕಡೆ ತಲೆಮರೆಸಿಕೊಂಡು ಎನ್‌ಐಎ ಅಧಿಕಾರಿಗಳಿಗೆ ತಲೆನೋವಾಗಿದ್ದ. ಕೊನೆಗೂ ಆತನನ್ನು ಪತ್ತೆ ಹಚ್ಚಲಾಗಿದ್ದು, ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ಆರೋಪಿಯ ಸುಳಿವು ಕೊಟ್ಟವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನ ಕೂಡಾ ಘೋಷಿಸಲಾಗಿತ್ತು. ಆದ್ರೆ ಎನ್‌ಐಎ ಅಧಿಕಾರಿಗಳೇ ಆರೋಪಿಯನ್ನು ಹಿಡಿದ್ದಾರೆ. ಉಗ್ರ ಮುಸಾಮೀರ್ ಶಾಜೀನ್ ಹುಸೇನ್ ಜೊತೆ ಮಾಸ್ಟರ್ ಮೈಂಡ್ ಮತೀನಾ ತಾಹಾ ಉಗ್ರನನ್ನು ಕೂಡ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.