ಫ್ಲೈಓವರ್ ನಿಂದ ಹಾರಿ ನವವಿವಾಹಿತ ಆತ್ಮಹತ್ಯೆ
ಬೆಂಗಳೂರು: 4 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಯಂಡಹಳ್ಳಿ ಫ್ಲೈ ಓವರ್ ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.
ನವೀನ್ ಕುಮಾರ್ ಎಂಬ ಯುವಕನೇ ಆತ್ಮಹತ್ಯೆ ಮಾಡಿಕೊಂಡವನು. 30 ವರ್ಷದ ನವೀನ್ ಕುಮಾರ್ ಜ್ಞಾನಭಾರತಿಯ ಮಲ್ಲಸಂದ್ರದಲ್ಲಿ ವಾಸವಿದ್ದ. ಅದೇನಾಯ್ತೋ ಏನೋ, ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೈಕ್ ನಲ್ಲಿ ಬಂದಿದ್ದ ನವೀನ್ ಕುಮಾರ್ ಬೈಕ್ ಫ್ಲೈಓವರ್ ಮೇಲೆ ನಿಲ್ಲಿಸಿದ್ದಾನೆ. ನಂತರ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೀವ್ರ ರಕ್ತಸ್ರಾವವಾಗಿದ್ದರಿಂದ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತ ನವೀನ್ ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. 4 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಕೆಲಸಕ್ಕೆ ಹೋಗುತ್ತೇನೆಂದು ರೆಡಿಯಾಗಿ ಬಂದವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.