BengaluruPolitics

ರಾಜ್ಯಸಭಾ ಚುನಾವಣೆ; ಸಿದ್ದರಾಮಯ್ಯ ಮನವೊಲಿಸಲು ಜೆಡಿಎಸ್‌ ಪ್ರಯತ್ನ

ಬೆಂಗಳೂರು; ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಟಾಂಗ್‌ ಕೊಡಲು ಸಿದ್ದರಾಮಯ್ಯ ಹೂಡಿದ ತಂತ್ರದಿಂದಾಗಿ ಇನ್ನೂ ಗೊಂದಲ ಮುಂದುವರೆದಿದೆ. ಈ ನಡುವೆ ಕಾಂಗ್ರೆಸ್‌ಗೆ ತಿರುಮಂತ್ರ ಹೇಳಲು ಹೊರಟಿದ್ದ ಜೆಡಿಎಸ್‌ ನಾಯಕರು ಕೊನೆಗೆ ಸಂಧಾನದ ಮಾತುಕತೆಗೆ ಮುಂದಾಗಿದ್ದಾರೆ.

  ಕಾಂಗ್ರೆಸ್‌ ಪಕ್ಷಕ್ಕೆ ಒಂದು ಸ್ಥಾನ ಗೆಲ್ಲಲು ಅವಕಾಶ ವಿದೆ. ಹೆಚ್ಚುವರಿ ಶಾಸಕರು ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿಯನ್ನು ಬೆಂಬಲಿಸಿದರೆ, ಕುಪೇಂದ್ರ ರೆಡ್ಡಿ ಗೆಲ್ಲುತ್ತಿದ್ದರು. ಆದ್ರೆ ಸಿದ್ದರಾಮಯ್ಯ ಕೊನೇ ಗಳಿಗೆ ತಂತ್ರ ಹೂಡಿ ಕಾಂಗ್ರೆಸ್‌ನಿಂದ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್‌ ಅಲಿ ಖಾನ್‌ ಅವರನ್ನು ಸ್ಪರ್ಧೆಗೆ ಇಳಿಸಿದ್ದಾರೆ. ಹೀಗಾಗಿ, ನಾಲ್ಕನೇ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದರ ಬಗ್ಗೆ ಕುತೂಹಲಕ್ಕೆ ಕಾರಣವಾಗಿದೆ. ಇತ್ತ ಇಬ್ಬರು ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬಂತೆ ಲಾಭ ಪಡೆದುಕೊಳ್ಳಲು ಬಿಜೆಪಿ ಲೆಹರ್‌ ಸಿಂಗ್‌ ಅವರನ್ನು ಅಖಾಡಕ್ಕಿಳಿಸಿದೆ.

   ಈ ಹಿನ್ನೆಲೆಯಲ್ಲಿ ಮೊದಲ ಕಾಂಗ್ರೆಸ್‌ ನಿಲುವಿನ ವಿರುದ್ಧ ತಿರುಗಿಬಿದ್ದಿದ್ದ ಜೆಡಿಎಸ್‌ ನಾಯಕರು ಈಗ ಕಾಂಗ್ರೆಸ್‌ ನಾಯಕರ ಮನವೊಲಿಸೋ ಪ್ರಯತ್ನ ನಡೆಸುತ್ತಿದ್ದಾರೆ. ಜೆಡಿಎಸ್‌ ನಾಯಕ ರೇವಣ್ಣ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಲಿರುವ ರೇವಣ್ಣ ಅವರು ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.  

Share Post