Politics

ಬಿಜೆಪಿ ಜೊತೆ ಮೈತ್ರಿ ಸಾಧ್ಯವಿಲ್ಲ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಯಾವುದೇ ಕಾರಣಕ್ಕೂ ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಅಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ರು.  2023ರ ಚುನಾವಣೆಯಲ್ಲಿ ಎಲ್ಲಾ ಕಡೆ ನಾವು ಸ್ಪರ್ಧೆ ಮಾಡ್ತೇವೆ, ಚುನಾವಣೆಗೆ ಬೇಕಿರುವ ತಯಾರಿ ಮಾಡಿಕೊಳ್ಳುವಂತೆ  ಜೆಡಿಎಸ್‌ ಮುಖಂಡರಿಗೆ ಈಗಾಗಲೇ ಸೂಚಿಸಿರುವುದಾಗಿ ತಿಳಿಸಿದ್ರು. ಆದ್ರೆ ಕುಮಾರಸ್ವಾಮಿಯವರ ಹೇಳಿಕೆಯಿಂದ ಯಡಿಯೂರಪ್ಪನವರಿಗೆ ಬೇಸರ ತಂದಿರುವುದಂತೂ ಸತ್ಯ ಯಾಕಂದ್ರೆ ಮೊನ್ನೆಯಷ್ಟೇ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಬಿಎಸ್‌ವೈ ಸುಳಿವು ನೀಡಿದ್ರು, ಅದಕ್ಕೆ ಹೆಚ್‌ಡಿಕೆ ಕೂಡ 2ದಿನ ಗಡುವು ತೆಗೆದುಕೊಂಡ ನಿರ್ಧಾರ ತಿಳಿಸುವುದಾಗಿ ಹೇಳಿದ್ರು, ಈಗ ಮೈತ್ರಿ ಸಾಧ್ಯವಿಲ್ಲ ಎಂದಿರುವುದು ಬಿಜೆಪಿಗೆ ಹಿನ್ನೆಡೆಯಾದಂತಿದೆ.

Share Post