Bengaluru

ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ITV ಮುಖ್ಯಸ್ಥ ಆರ್.ಜಯಪ್ರಕಾಶ್ ಆಯ್ಕೆ

ಬೆಂಗಳೂರು; 2022ನೇ ಸಾಲಿನ ಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರು ಪ್ರಶಸ್ತಿ ಪ್ರಕಟವಾಗಿದೆ. ITV ಗ್ರೂಪ್ ಮುಖ್ಯಸ್ಥರಾದ ಆರ್.ಜಯಪ್ರಕಾಶ್ ಅವರನ್ನು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಯಪ್ರಕಾಶ್ ಅವರು, ನ್ಯೂಸ್ 9, ಡೆಕ್ಕನ್ ಕ್ರಾನಿಕಲ್, ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ ಪ್ರೆಸ್ ಸೇರಿ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

ಸದ್ಯ ಜಯಪ್ರಕಾಶ್ ಅವರು, ನ್ಯೂಸ್ ಎಕ್ಸ್, ಇಂಡಿಯಾ ಟಿವಿ ಒಳಗೊಂಡ ಐಟಿವಿ ಗ್ರೂಪ್ ಮುಖ್ಯಸ್ಥರಾಗಿದ್ದಾರೆ. ಅವರ ಸೇವೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇನ್ನು ಬೆಂಗಳೂರು ಪ್ರೆಸ್ ಕ್ಲಬ್​ನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರೆಸ್​ ಕ್ಲಬ್ ವಾರ್ಷಿಕ ವಿಶೇಷ ಪುರಸ್ಕೃತರ ಪಟ್ಟಿ :

ಆರ್.ಜಯಪ್ರಕಾಶ್ * ಬಸವರಾಜು, * ಹನುಮೇಶ್ ಯಾವಗಲ್, * ಹೆಚ್.ಎಸ್. * ಬಲರಾಂ, * ಅಗ್ರಹಾರ ಕೃಷ್ಣಮೂರ್ತಿ, * ಗಂಗಾಧರ, * ಮೊದಲಿಯಾರ್, * ಚೆನ್ನ ನಾಗರಾಜ್ ಎಂ., * ಶ್ರೀಧರ ಬಿ.ಎನ್, * ವಿನಯ್ .ಎಂ, * ಗೌತಮ್ ಮಾಚಯ್ಯ ಎಂ, * ರಾಜಶೇಖರ್‌ .ಎಸ್‌., * ಹೆಚ್. ಮೂರ್ತಿ , * ಸಂಗಮ್ ದೇವ್ ಐ.ಹೆಚ್, * ಮುನೀರ್ ಅಹಮದ್ ಅಬದ್, * ಕೆ.ವಿ. ಪರಮೇಶ್ , * ಸಿ.ಎಸ್. ಬೋಪಯ್ಯ, * ಶ್ಯಾಂ ಬೋಜಕ್, * ಭಾಗ್ಯ ಪ್ರಕಾಶ್ .ಕೆ, * ಅನಿಲ್ ವಿ. ಗೆಜ್ಜೆ, * ಗಾಯತ್ರಿ ನಿವಾಸ್, * ಶಿವಣ್ಣ, * ಶೋಭಾ ಎಂ.ಸಿ, * ದಿವಾಕರ್ .ಸಿ, * ನಾಗಭೂಷಣ್ ಮೈ.ಎಂ, * ವಿಲಾಸ್ ನಂದೂಡಕರ್, * ಇ ನಾಗರಾಜು, * ಪಿ. ರಾಜೇಂದ್ರ, * ಶಿವಾನಂದ ತಗಡೂರು ಟಿ.ವಿ., * ಶಿವಪ್ರಕಾಶ್ .ಎಸ್ , * ಓಂಕಾರ ಕಾಕಡೆ, *ನರಸಿಂಹ ರಾವ್, * ರಾಘವೇಂದ್ರ ಕೆ. (ತೋಗರ್ಸಿ), * ಗಿರಿಪ್ರಕಾಶ್ ಕೆ.

Share Post