Bengaluru

ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗವಾಗಿ ಬುಲೆಟ್‌ ರೈಲು!

ಬೆಂಗಳೂರು; ದೇಶದಲ್ಲಿ ಬುಲೆಟ್‌ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ಈಗಾಗಲೇ ಹಲವು ವರ್ಷಗಳಿಂದ ಕೆಲಸ ಶುರು ಮಾಡಿದೆ. ಅಹ್ಮದಾಬಾದ್‌-ಮುಂಬೈ ಮಾರ್ಗದಲ್ಲಿ ಬುಲೆಟ್‌ ಟ್ರೈನ್‌ ಓಡಿಸಲು ಈಗಾಗಲೇ ಅದರ ಕಾಮಗಾರಿ ನಡೆಯುತ್ತಿದೆ. ಇದೀಗ ದೇಶದ ಎರಡನೇ ಬುಲೆಟ್‌ ಟ್ರೈನ್‌ ಮಾರ್ಗವನ್ನು ಅಂತಿಮ ಮಾಡಲಾಗಿದೆ. ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಬುಲೆಟ್‌ ಟ್ರೈನ್‌ ಓಡಿಸಲು ತೀರ್ಮಾನ ಮಾಡಲಾಗಿದ್ದು, ಇದಕ್ಕಾಗಿ ಸರ್ವೇ ಕಾರ್ಯ ಶುರುವಾಗಿದೆ.

ಭಾರತೀಯ ರೈಲ್ವೆ ಇಲಾಖೆ ಬುಲೆಟ್ ರೈಲು ಕಾರಿಡಾರ್ ನಿರ್ಮಾಣಕ್ಕಾಗಿ ಸರ್ವೇ ನಡೆಸಲು ಮುಂದಾಗಿದೆ. ಚೆನ್ನೈ, ಪೊನ್ನಮಲ್ಲೇ, ಅರಕೋಣಂ, ಚಿಟ್ಟೂರು, ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣದಲ್ಲಿ ಬುಲೆಟ್ ರೈಲಿನ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಇದರ ಹೊಸ ಮ್ಯಾಪ್‌ ಕೂಡಾ ರಿಲೀಸ್‌ ಆಗಿದೆ.

ಮೈಸೂರಿನಿಂದ ಹೊರಡುವ ಬುಲೆಟ್‌ ರೈಲು ಮಂಡ್ಯ, ಚನ್ನಪಟ್ಟಣ, ಬೆಂಗಳೂರುಗಳಲ್ಲಿ ನಿಲ್ಲಲಿದೆ. ಚಿತ್ತೂರು ಮಾರ್ಗವಾಗಿ ಈ ರೈಲು ಚೆನ್ನೈ ತಲುಪಲಿದೆ ಎಂದು ತಿಳಿದುಬಂದಿದೆ. ಅಂದುಕೊಂಡಂತೆ ಕಾಮಗಾರಿ ನಡೆದರೆ, 2025ರ ಅಂತ್ಯದ ವೇಲೆಗೆ ಈ ಮಾರ್ಗದಲ್ಲಿ ಬುಲೆಟ್‌ ಟ್ರೈನ್‌ ಓಡಾಡಲಿದೆ.

 

Share Post