BengaluruCrimePolitics

ಪ್ರಜ್ವಲ್‌ ರೇವಣ್ಣ ಸಂಸತ್‌ ಸ್ಥಾನದ ಅಸಿಂಧು ಆದೇಶ; ಅಮಾನತು ಮಾಡಲು ಹೈಕೋರ್ಟ್‌ ನಕಾರ

ಬೆಂಗಳೂರು; ಚುನಾವಣೆ ಸಮಯದಲ್ಲಿ ಸರಿಯಾದ ಆಸ್ತಿ ಮಾಹಿತಿ ಒದಗಿಸಿಲ್ಲ ಎಂಬುದು ಸಾಬೀತಾಗಿದ್ದರಿಂದ ಹೈಕೋರ್ಟ್‌ ಇತ್ತೀಚೆಗಷ್ಟೇ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಸಂಸತ್‌ ಸ್ಥಾನವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಅಮಾನತು ಮಾಡಬೇಕೆಂದು ಪ್ರಜ್ವಲ್‌ ರೇವಣ್ಣ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ ಈ ಅರ್ಜಿಯನ್ನು ಕೂಡಾ ಹೈಕೋರ್ಟ್‌ ವಜಾ ಮಾಡಿದೆ.

ಆಯ್ಕೆ ಅಸಿಂಧುಗೊಳಿಸಿರುವುದನ್ನು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ಈಗ ಕೊಟ್ಟಿರುವ ಆದೇಶವನ್ನು ಅಮಾನತಿಲ್ಲಿಸಬೇಕೆಂದು ಪ್ರಜ್ವಲ್‌ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಆದ್ರೆ ಇದಕ್ಕೆ ಹೈಕೋರ್ಟ್‌ ಅವಕಾಶ ನೀಡಿಲ್ಲ.

 

 

Share Post