Bengaluru

ರಾಜ್ಯಪಾಲರ ಭಾಷಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ವಂದನಾ ನಿರ್ಣಯ ಅಂಗೀಕಾರ

ವಿಧಾನಸಭೆ: ಸಿಎಂ ಬಸವರಾಜ್‌ ಬೊಮ್ಮಾಯಿಯವರು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಬಗ್ಗೆ ಮಾತನಾಡಿದ್ದಾರೆ. ಇಂದು ವಂದನಾ ನಿರ್ಣಯವನ್ನು ಅಂಗೀಕಾರ ಮಾಡಲು ತುಂಬಾ ನೋವಾಗುತ್ತದೆ. ಇದಕ್ಕೆ ಕಾಂಗ್ರೆಸ್‌ ಪಕ್ಷವೇ ಕಾರಣ. ಇದು ಬಹಳ ನೋವಿನ ಸಂಗತಿ. ವಂದನಾ ನಿರ್ಣಯದ ಭಾಷಣದಲ್ಲಿ ಸರ್ಕಾರದ ಟೀಕೆ ಟಿಪ್ಪಣಿಗಳ ಬಗ್ಗೆ ವಿಪಕ್ಷ ಹೇಳಬೇಕಿತ್ತು. ಅದನ್ನು ಮಾಡದೆ ಬೇಜಾವಾಬ್ದಾರಿ ತೋರುತ್ತಿದೆ. ಇದು ಕಾಂಗ್ರೆಸ್‌ನವರ ಪಾಲಿಗೆ ಕಪ್ಪು ಚುಕ್ಕೆಯಾಗಿ ನಿಂತಿದೆ. ನಾವು ಕೂಡ ವಿಪಕ್ಷ ಸ್ಥಾನದಲ್ಲಿ ಇದ್ವಿ ಆದರೆ ಹೀಗೆ ಎಂದು ಮಾಡಿಲ್ಲ. ಇವರು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ನಾಲಾಯಕ್‌ ಎಂದು ಸಿಎಂ ಕಿಡಿ ಕಾರಿದ್ದಾರೆ.

ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ವ್ಯಾಧಿಯನ್ನು ಸವಾಲಾಗಿ ಸ್ವೀಕರಿಸಿ, ಅಗತ್ಯ ಇರುವ ಎಲ್ಲಾ ಮೆಡಿಕಲ್‌ ಕಿಟ್‌, ಆಂಬುಲೆನ್ಸ್‌, ಮರಣ ಹೊಂದಿದವರಿಗೆ ಪರಿಹಾರ ನೀಡಲಾಗಿದೆ. ಕೋವಿಡ್‌ ಸಮಯದಲ್ಲಿ ಕೆಲಸ ಕಳೆದುಕೊಂಡಿರುವವರಿಗೆ ಮೂರು ಸಾವಿರ ಕೋಟಿಗೂ ಹೆಚ್ಚು ಪರಿಹಾರ ನೀಡಲಾಗಿದೆ. ಜನರ ಪ್ರಾಣ ಉಳಿಸಲು ಸಹಕರಿಸಿದ ಎಲ್ಲಾ ಕೊರೊನಾ ವಾರಿಯರ್ಸ್‌ಗೆ ಸಿಎಂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕೋವಿಡ್‌ ಒಂದು ಮತ್ತ ಎರಡನೇ ಅಲೆಯಲ್ಲಿ ಪ್ರಧಾನಿ ಮೋದಿ ದೇಶದ ಜನರ ಜೊತೆ ಇದ್ದಾರೆ. 130 ಕೋಟಿ ಜನರಿಗೆ ವ್ಯಾಕ್ಸಿನ್‌ ಕೊಟ್ಟಿರುವ ದಾಖಲೆ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಸದನದ ಮುಖಾಂತರ ಕೃತಜ್ಞತೆ ತಿಳಿಸುತ್ತೇನೆ.

ತೋಟಗಾರಿಕಾ ಇಲಾಖೆಗೆ ಕೇಂದ್ರ ಸರ್ಕಾರ 18,000 ರಾಜ್ಯ ಸರ್ಕಾರ 25,000ಕೋಟಿ ಹಣ ಬಿಡುಗಡೆ ಮಾಡಲಾಗಿದೆ. 1555 ಕೋಟಿ ನೆರೆಹಾವಳಿ, ಮನೆಗೆಳಿಗೆ 400 ಕೋಟಿ ಆರ್ಥಿಕ ನೆರವು. ಪೂರ್ಣ ಪ್ರಮಾಣ ಬಿದ್ದ ಮನೆಗಳಿಗೆ 5ಲಕ್ಷ ಅಲ್ಪ ಪ್ರಮಾಣದಲ್ಲಿ ಕುಸಿದ ಮನೆಗಳಿಗೆ 3ಲಕ್ಷ,  50 ಸಾವಿರ ವಸತಿ ಅನುದಾನ ನೀಡಲಾಗುತ್ತಿದೆ.
ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ 1,900   ಕೋಟಿ ಒಮ್ಮೆ 1,700ಕೋಟಿ ಬಿಡುಗಡೆ ಮಾಡಲಾಗಿದೆ.

ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ರೈತ ವಿದ್ಯಾನಿಧಿ 2ರಿಂದ 11 ಸಾವಿರದವರೆಗೆ ನೀಡುತ್ತೇವೆ. 89ಸಾವಿರ ಕಟ್ಟದ ಕಾರ್ಮಿಕರಿಗೆ 150ಕೋಟಿ ಹಣ ಬಿಡುಗಡೆ ಮಾಡಲಾಗಿದೆ.
ವಿಕಲ ಚೇತನರಿಗೆ 600 ರಿಂದ 800 ಹೆಚ್ಚಳ, ವಿಧವಾ ವೇತನ ಕೂಡ 600 ರಿಂದ 800 ಹೆಚ್ಚಳ ಮಾಡಲಾಗಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. 7,200 ಸ್ತ್ರೀಶಕ್ತಿ ಸಂಘಕ್ಕೆ 25ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ 2,500 ಲಕ್ಷ ಮನೆಗಳು ನಿರ್ಮಾಣ ಆಗಲಿವೆ.
ಗ್ರಾಮ ಒನ್‌ನಲ್ಲಿ ನೂರು ಸೇವೆಗಳು ಗ್ರಾಮ ಪಂಚಾಯತ್‌ನಲ್ಲಿ ಸಿಗುವಂತೆ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಸಲಾಗಿದೆ.
ಲೋಕೋಪಯೋಗಿ ಇಲಾಖೆ 3,500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 2,200 ಉದ್ದ ರಸ್ತೆ ಕೆಶಿಪ್‌ ಅಡಿಯಲ್ಲಿ ಜಾರಿಯಾಗಕಿದೆ. ಜಲಜೀವನ್‌ ಮಿಷನ್‌ ಅಡಿಯಲ್ಲಿ ಮನೆ ಮನೆ ಗಂಗೆ 11ಲಕ್ಷದ 27 ಸಾವಿರ ಮನೆಗಳಿಗೆ ಒದಗಿಸಲಾಗಿದೆ.

ವಿಧಾನಸಭೆ ಕಲಾಪದಲ್ಲಿ ಆಡಳಿತ ಪಕ್ಷದ ಅಭಿವೃದ್ಧಿ ವಿವರಗಳನ್ನು ಸಭಾಪತಿ ಮುಂದೆ ಸಿಎಂ ಬೊಮ್ಮಾಯಿ ತಿಳಿಸಿದ್ರು.

Share Post