BengaluruCinema

ಮುಸ್ಲಿಮರೆಲ್ಲಾ ಲವ್‌ ಜಿಹಾದ್‌ ಮಾಡಲ್ಲ; ಖ್ಯಾತ ನಟಿ ಪ್ರಿಯಾಮಣಿ

ಬೆಂಗಳೂರು; ಮುಸ್ಲಿಮರೆಲ್ಲಾ ಲವ್‌ ಜಿಹಾದ್‌ ಮಾಡೋದಿಲ್ಲ. ಮುಸ್ಲಿಮರೆಲ್ಲರನ್ನೂ ಇಲ್ಲಿ ಉಗ್ರರು ಎನ್ನುವಂತೆ ನೋಡಲಾಗುತ್ತಿದೆ ಎಂದು ಖ್ಯಾತ ನಟಿ ಪ್ರಿಯಾಮಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ಮುಸ್ಲಿಂ ಹುಡುಗನನ್ನು ಮದುವೆಯಾದೆ ಎಂಬ ಕಾರಣಕ್ಕೆ ನಾನು ಸಾಕಷ್ಟು ಟೀಕೆಗೆ ಒಳಗಾಗಿದ್ದೆ. ಸಾಕಷ್ಟು ಜನ ನನ್ನನ್ನು ಟ್ರೋಲ್‌ ಮಾಡಿದರು. ಕೆಲವರು ಲವ್‌ ಜಿಹಾದ್‌ ಒಳಗಾಗಿದ್ದಾರೆ ಎಂದೂ ಮಾತನಾಡಿದರು ಅಂತ ಪ್ರಿಯಾಮಣಿ ಹೇಳಿಕೊಂಡಿದ್ದಾರೆ.

ಪ್ರಿಯಾಮಣಿಯವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು 2017ರಲ್ಲಿ ಮುಸ್ತಫಾ ಅವರನ್ನು ರಿಜಿಸ್ಟರ್‌ ಮ್ಯಾರೇಜ್‌ ಆಗಿದ್ದಾರೆ. ಮುಸ್ತಫಾ ಅವರಿಗೆ ಇದು ಎರಡನೇ ಮದುವೆಯಾಗಿದ್ದರಿಂದ ಹಲವಾರು ಮಂದಿ ಪ್ರಿಯಾಮಣಿಯನ್ನು ಟ್ರೋಪ್‌ ಮಾಡಿದ್ದರು. ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಆದ್ರೆ ಇದುವರೆಗೂ ಪ್ರಿಯಾಮಣಿ ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೆ ಈಗ ಪ್ರಿಯಾಮಣಿ ಈ ಬಗ್ಗೆ ಮಾತನಾಡಿದ್ದಾರೆ. ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದನ್ನು ನೆನಪಿಸಿದ್ದಾರೆ.

ಅನ್ಯಧರ್ಮೀಯರನ್ನು ಪ್ರೀತಿ ಮಾಡಿ ಮದುವೆಯಾಗುವುದೇ ಅಪರಾಧ ಎನ್ನುವಂತೆ ಕೆಲವರು ಮಾತನಾಡುತ್ತಾರೆ. ಆದ್ರೆ ಪ್ರೀತಿಯಲ್ಲಿ ಜಾತಿ, ಧರ್ಮಗಳು ಇರೋದಿಲ್ಲ. ಬೇರೆ ಜಾತಿ ಅಥವಾ ಧರ್ಮದವರನ್ನು ಮದುವೆಯಾದರೆ ಏನು ತಪ್ಪು ಎಂದು ಪ್ರಿಯಾಮಣಿ ಪ್ರಶ್ನೆ ಮಾಡಿದ್ದಾರೆ.

Share Post