BengaluruPolitics

ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನಕ್ಕೆ ಚಕ್ರವರ್ತಿ ಸೂಲಿಬೆಲೆ ಆಕ್ಷೇಪ

ಬೆಂಗಳೂರು; ರಾಮಜನ್ಮಭೂಮಿಗಾಗಿ ಹೋರಾಟ ಮಾಡಿದ 31 ವರ್ಷದ ಹಿಂದಿನ ಪ್ರಕರಣವನ್ನು ಈಗ ಮತ್ತೆ ಹುಬ್ಬಳ್ಳಿಯಲ್ಲಿ ಮುನ್ನೆಲೆಗೆ ತಂದಿದ್ದಾರೆ. ಇದು ಮುಸ್ಲಿಮರ ಓಲೈಕೆಗಾಗಿ ಮಾಡಿರುವ ತಂತ್ರ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಈ ಘಟನೆ ನಡೆದ ಬಳಿಕ ಹಲವು ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದ್ರೆ ರಾಮಮಂದಿರ ಉದ್ಘಾಟನೆಯ ಈ ಸಮಯದಲ್ಲಿ ಏಕಾಏಕಿ ಕರಸೇವಕರನ್ನು ಬಂಧಿಸಿದ್ದೇಕೆ ಎಂದು ಸೂಲಿಬೆಲೆ ಪ್ರಶ್ನೆ ಮಾಡಿದ್ದಾರೆ. 

ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ನಡೆದಿತ್ತು. ಈ ವೇಳೆ ಪೊಲೀಸ್‌ ಠಾಣೆ ಹಾಗೂ ಶಾಸಕರ ಮನೆ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಬಂಧಿತರಾದವರನ್ನು ಅಮಾಯಕರು ಎಂದು ಕರೆದಿದ್ದರು. ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆಯಲಾಗಿತ್ತು.  ಇನ್ನು ಹುಬ್ಬಳ್ಳಿ ಪ್ರಕರಣ ನಡೆದಾಗ ಅದರಲ್ಲಿ ಭಾಗಿಯಾದವರು ತರುಣರಾಗಿದ್ದರು. ಈಗ ಅವರಿಗೆ 70 ವರ್ಷ ಆಗಿರಬಹುದು. ಈ ಸಮಯದಲ್ಲಿ ಬಂಧನ ಅಗತ್ಯವೇ ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನೆ ಮಾಡಿದ್ದಾರೆ.

ಕರ ಸೇವಕರನ್ನು ಭಯಪಡಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಈಗ ಮುಂದಾಗಿದೆ. ಇದು ಸರಿಯಲ್ಲ ಎಂದೂ ಅವರು ಹೇಳಿದ್ದಾರೆ.

Share Post