ಯಾವ ಶಾಸಕರಿಗೂ ಅಸಮಾಧಾನ ಇಲ್ಲ; ಸ್ಪಷ್ಟನೆ ಕೊಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು; ಕಾಂಗ್ರೆಸ್ ಶಾಸಕರೇ ಸಚಿವರ ವಿರುದ್ಧ ಪತ್ರ ಬರೆಯುತ್ತಿದ್ದಾರೆ ಎಂಬ ವಿಪಕ್ಷಗಳ ಹೇಳಿಕೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅಲ್ಲಗೆಳೆದಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಯಾವ ಶಾಸಕರೂ ಸಚಿವರ ವಿರುದ್ಧ ಪತ್ರ ಬರೆದಿಲ್ಲ, ಅವರಲ್ಲಿ ಅಸಮಾಧಾನ ಕೂಡಾ ಇಲ್ಲ. ಎಲ್ಲವೂ ಊಹಾಪೋಹದ ಸುದ್ದಿಗಳು ಅಷ್ಟೇ ಎಂದು ಹೇಳಿದ್ದಾರೆ.
ಶಾಸಕರು ಹೆಚ್ಚಿನ ಅನುದಾನ ಕೇಳುತ್ತಿದ್ದಾರೆ. ಕೆಲವರು 10 ಕೋಟಿ, 20 ಕೋಟಿ, 100 ಕೋಟಿ, 300 ಕೋಟಿ ರೂಪಾಯಿ ಬೇಕು ಎಂದು ಕೇಳುತ್ತಿದ್ದಾರೆ. ನಾವು ಭರವಸೆಗಳನ್ನು ಕೊಟ್ಟಿರುತ್ತೇವೆ. ಅದಕ್ಕಾಗಿ ಕನಿಷ್ಠ ಒಂದು ವರ್ಷದಿಂದ ಸಮಾಧಾನದಿಂದ ಕಾಯಬೇಕೆಂದು ಹೇಳಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಎಲ್ಲಾ ಸಚಿವರ ಅವರ ಕೆಲಸ ಮಾಡುತ್ತಿದ್ದಾರೆ. ಶಾಸಕರು ಕೂಡಾ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಯಾವುದೇ ಅಸಮಾಧಾನ ಇಲ್ಲ ಎಂದೂ ಡಿಕೆಶಿ ಹೇಳಿದ್ದಾರೆ.
ನಾವು ಕೊಟ್ಟ ಐದು ಗ್ಯಾರೆಂಟಿಗಳನ್ನು ಮೊದಲು ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ಅವುಗಳನ್ನು ಸಮಪರ್ಕವಾಗಿ ಜಾರಿಗೆ ತರಲುವ ಬಗ್ಗೆ ಶಾಸಕರ ಜೊತೆ ಮತನಾಡಬೇಕಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.